ಉಳ್ಳಾಲ: ರಾಜ್ಯಾದ್ಯಂತ ಮುಂದಿನ ತಿಂಗಳಲ್ಲಿ 5 ಕಡೆ ವಾಹನ ಚಾಲನಾ ತರಬೇತಿ ಕೇಂದ್ರ ಆರಂಭಿಸಲು ತೀರ್ಮಾನಿಸಲಾಗಿದ್ದು, ಈ ಪೈಕಿ ದ.ಕ ಜಿಲ್ಲೆಯಲ್ಲಿ 15 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ಪೂರ್ಣಗೊಂಡಿದೆ ಎಂದು ಉಪ ಮುಖ್ಯಮಂತ್ರಿ ಲಕ್ಷ್ಮಣ ಸಂಗಪ್ಪ ಸವದಿ ತಿಳಿಸಿದರು.
ಹೊಳಲ್ಕೆರೆಯಲ್ಲಿ ಭಾನುವಾರ ಚಾಲನಾ ಕೇಂದ್ರದ ಉದ್ಘಾಟನೆಯಾಗಲಿದ್ದು, 15 ಕೋಟಿ ರೂ. ನಲ್ಲಿ ಸುಸಜ್ಜಿತವಾಗಿ ಕಟ್ಟಡ ನಿರ್ಮಾಣವಾಗಿದೆ. ಲೈಟ್ ಮೋಟಾರ್ ವಾಹನದ ಚಾಲನೆ ತರಬೇತಿ ಕೇಂದ್ರವನ್ನು ಕಂಬಳಪದವಿನಲ್ಲಿ ಮುಂದಿನ ದಿನಗಳಲ್ಲಿ ಸ್ಥಾಪಿಸಲಾಗುವುದು ಎಂದ ಸಚಿವರು ತಿಳಿಸಿದರು.
ದ.ಕ ಜಿಲ್ಲೆಯ ಇಬ್ಬರು ಸಚಿವರು ಸರಳ ವ್ಯಕ್ತಿತ್ವದವರು. ಇತರೆ ಎಲ್ಲಾ ಸಚಿವರಿಗೂ ಮಾದರಿಯಾಗಿದ್ದಾರೆ. ಅಪಘಾತ ರಹಿರ ಚಾಲಕರನ್ನು ಪ್ರೋತ್ಸಾಹಿಸುವುದು ಸರ್ಕಾರದ ಗುರಿ. ಈ ನಿಟ್ಟಿನಲ್ಲಿ ಅಪಘಾತ ರಹಿರ ಚಾಲಕರಿಗೆ ಪ್ರತಿವರ್ಷ ಚಿನ್ನ ಮತ್ತು ಬೆಳ್ಳಿಯ ಪದಕಗಳನ್ನು ನೀಡಿ ಪುರಸ್ಕರಿಸಲಾಗುತ್ತಿದೆ.15 ವರ್ಷಗಳಲ್ಲಿ ಅಪಘಾತ ರಹಿರ ಚಾಲನೆ ಮಾಡಿದವರಿಗೆ ಮುಖ್ಯಮಂತ್ರಿಗಳ ಕೈಯಿಂದಲೇ ಚಿನ್ನದ ಪದಕವನ್ನು ಕೊಡಿಸಲಾಗುತ್ತದೆ ಎಂದು ಸವದಿ ತಿಳಿಸಿದರು.