ಬಂಟ್ವಾಳ: ಲಾಕ್‌ಡೌನ್ ಹಿನ್ನೆಲೆ ನ್ಯಾಯಾಲಯಗಳು 11 ಗಂಟೆಯಿಂದ 2 ಗಂಟೆವರೆಗೆ ತೆರೆದಿರುವುದರಿಂದ ವಕೀಲರು ತಮ್ಮ ಕಚೇರಿಗಳಿಗೆ ತೆರಳಲು ಅವಕಾಶ ಮಾಡಿ ಕೊಡಬೇಕು ಎಂದು ಬಂಟ್ವಾಳ ಪೊಲೀಸ್ ಉಪ ವಿಭಾಗಾಧಿಕಾರಿಗೆ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆ ಮಂಗಳೂರಿನ ಬಂಟ್ವಾಳ ಘಟಕದ ಸದಸ್ಯರು ಮನವಿ ಮಾಡಿದರು.
ಲಾಕ್‌ಡೌನ್ ವೇಳೆ ಸಂಚಾರಕ್ಕೆ ಅವಕಾಶ ಮಾಡಿಕೊಡುವಂತೆ ವಕೀಲರ ಮನವಿ - ಮಂಗಳೂರು ಲಾಕ್‌ಡೌನ್ ನ್ಯೂಸ್
ಲಾಕ್ ಡೌನ್ ವೇಳೆ ವಕೀಲರು ಕಚೇರಿಗೆ ತೆರಳಲು ಅವಕಾಶ ಮಾಡಿಕೊಡಿ ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆಯ ಬಂಟ್ವಾಳ ಘಟಕದ ಸದಸ್ಯರು ಮನವಿ ಮಾಡಿದರು.

Lawyer association
ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕಾನೂನು ವೇದಿಕೆ ಮಂಗಳೂರು ಜಿಲ್ಲಾ ಘಟಕದ ಉಪಾಧ್ಯಕ್ಷರಾದ ಉಮೇಶ್ ಕುಮಾರ್ ವೈ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೀರೇಂದ್ರ ಎಂ ಸಿದ್ದಕಟ್ಟೆ, ಬಂಟ್ವಾಳ ಘಟಕದ ಅಧ್ಯಕ್ಷ ಸುರೇಶ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರವೀಂದ್ರ ಕುಕ್ಕಾಜೆ, ವಕೀಲರಾದ ರಾಜೇಶ್ ಬೊಳ್ಳುಕಲ್ಲು, ಅಲ್ವಿನ್ ಮೊಂತೆರೊ ಉಪಸ್ಥಿತರಿದ್ದರು.