ಬಂಟ್ವಾಳ(ದಕ್ಷಿಣ ಕನ್ನಡ):ಸ್ಥಳೀಯರ ವಿರೋಧದ ನಡುವೆಯೂ ಕೊರೊನಾ ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರವನ್ನು ಬಂಟ್ವಾಳ ತಾಲೂಕಿನ ಬಿ.ಸಿ. ರೋಡಿನ ಕೈಕುಂಜೆ ಎಂಬಲ್ಲಿ ತಾಲೂಕು ಆಡಳಿತ ನಡೆಸಿದೆ.
ಕೊರೊನಾ ಅಟ್ಟಹಾಸ: ವಿರೋಧದ ನಡುವೆ ಬಿ.ಸಿ. ರೋಡಿನಲ್ಲಿ ಮಹಿಳೆಯ ಅಂತ್ಯ ಸಂಸ್ಕಾರ - ಮಂಗಳೂರಿನಲ್ಲಿ ಕೊರೊನ
ಕೊರೊನಾ ಸೋಂಕಿನಿಂದ ಗುರುವಾರ ಮೃತಪಟ್ಟ ಬಂಟ್ವಾಳ ಪೇಟೆಯ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಮಂಗಳೂರಿನ ಕೆಲವೆಡೆ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಮಧ್ಯರಾತ್ರಿ 1.30ರ ಬಳಿಕ ಬಿ.ಸಿ. ರೋಡಿನ ಕೈಕುಂಜೆಯಲ್ಲಿ ಸ್ಥಳೀಯರ ಆಕ್ಷೇಪದ ನಡುವೆ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
![ಕೊರೊನಾ ಅಟ್ಟಹಾಸ: ವಿರೋಧದ ನಡುವೆ ಬಿ.ಸಿ. ರೋಡಿನಲ್ಲಿ ಮಹಿಳೆಯ ಅಂತ್ಯ ಸಂಸ್ಕಾರ last funeral in bc road](https://etvbharatimages.akamaized.net/etvbharat/prod-images/768-512-6916975-976-6916975-1587699457651.jpg)
ಕೊರೊನಾ ಸೋಂಕಿನಿಂದ ಬಂಟ್ವಾಳದ ಇಬ್ಬರು ಮಹಿಳೆಯರು ಮೃತಪಟ್ಟಿದ್ದಾರೆ. ಭಾನುವಾರ ಮೃತಪಟ್ಟಿದ್ದ ಮಹಿಳೆ ಅಂತ್ಯಸಂಸ್ಕಾರವನ್ನು ನಂದಿಗುಡ್ಡೆ ವಿದ್ಯುತ್ ಚಿತಾಗಾರದಲ್ಲಿ ನಡೆಸಲಾಗಿತ್ತು. ಆದರೆ ಗುರುವಾರ ಮೃತರಾದ ಮಹಿಳೆಯ ಅಂತ್ಯಸಂಸ್ಕಾರಕ್ಕೆ ಮಂಗಳೂರಿನಲ್ಲಿ ಸ್ಥಳೀಯರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೈಕುಂಜೆಯ ರುದ್ರಭೂಮಿಯಲ್ಲಿ ಸ್ಥಳೀಯರ ಆಕ್ಷೇಪದ ನಡುವೆಯೂ ಪೊಲೀಸ್ ಬಂದೋಬಸ್ತ್ನಲ್ಲಿ ಅಂತ್ಯಕ್ರಿಯೆ ನಡೆಸಲಾಗಿದೆ.
ಬಂಟ್ವಾಳ ಪೇಟೆಯ ಮಹಿಳೆ ಮೃತರಾಗಿದ್ದು, ಬಡ್ಡಕಟ್ಟೆಯಲ್ಲಿ ಸ್ಮಶಾನ ಇದ್ದರೂ ಕೂಡ ಅಲ್ಲೂ ಜನ ಜಮಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಬಿ.ಸಿ. ರೋಡಿನ ರೈಲ್ವೆ ನಿಲ್ದಾಣದ ಬಳಿ ಇರುವ ಗೂಡಿನಬಳಿ ಮತ್ತು ಕೈಕುಂಜೆ ಮಧ್ಯೆ ಇರುವ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರವನ್ನು ನೆರವೇರಿಸಲಾಗಿದೆ.