ಬೆಳ್ತಂಗಡಿ: ತಾಲೂಕಿನ ಸವಣಾಲು ಗ್ರಾಮದ ಕೆರೆಕೋಡಿ ಬಳಿಯ ಸುಂದರ ಆಚಾರ್ಯ ಎನ್ನುವರ ಮನೆ ಬಳಿ ದೊಡ್ಡ ಗಾತ್ರದ ಉಡವೊಂದು ಬಂದಿದ್ದು, ಇದು ಮನೆಯವರನ್ನು ಹಾಗೂ ಊರವರಲ್ಲಿ ಅಚ್ಚರಿ ಉಂಟುಮಾಡಿದೆ.
ದೊಡ್ಡ ಗಾತ್ರದ ಉಡ ನೋಡಿದ ಜನರಿಗೆ ಅಚ್ಚರಿ ಸವಣಾಲು ಬಳಿ ಮನೆಯ ಆಸುಪಾಸು ಸಾಮಾನ್ಯವಾಗಿ ಸಣ್ಣ ಗಾತ್ರದ ಉಡಗಳು ಕಾಣಸಿಗುತ್ತವೆ. ಆದರೆ ಈ ಬಾರಿ ದೊಡ್ಡ ಗಾತ್ರದ ಉಡ ಕಂಡುಬಂದಿದ್ದು, ಇಲ್ಲಿಯವರೆಗೆ ಇಷ್ಟು ದೊಡ್ಡ ಉಡವನ್ನು ನೋಡಿಲ್ಲ ಎಂದು ಸುಂದರ ಆಚಾರ್ಯ ಮನೆಯವರು ತಿಳಿಸಿದ್ದಾರೆ.
ಅ.31ರಂದು ಮಧ್ಯಾಹ್ನ ಒಮ್ಮೆ ಇವರ ಮನೆಯ ಬಳಿಗೆ ಬಂದಿದ್ದು, ಬಳಿಕ ಸಂಜೆ 4 ಗಂಟೆ ಸುಮಾರಿಗೆ ಮತ್ತೆ ಸುಂದರ ಆಚಾರ್ಯ ಅವರ ಮನೆಯ ಬಳಿ ಸುಳಿದಾಡಿದೆ. ಈ ಸಂದರ್ಭ ಸುಂದರ ಆಚಾರ್ಯ ಅವರ ಪುತ್ರ ರವಿ ಆಚಾರ್ಯ ಅವರು ತಮ್ಮ ಮೊಬೈಲ್ ನಲ್ಲಿ ವಿಡಿಯೋ ಮಾಡಿದ್ದಾರೆ.
ಏಪ್ರಿಲ್‍ನಿಂದ ಅಕ್ಟೋಬರ್ ಇವುಗಳ ಸಂತಾನೋತ್ಪತ್ತಿ ಸಮಯವಾಗಿದ್ದು, ಹೆಣ್ಣು ಉಡವು ಮಣ್ಣನ್ನು ತೋಡಿ ಮೊಟ್ಟೆ ಇಡುತ್ತವೆ. ಆದ್ದರಿಂದ ಈ ಉಡ ಮೊಟ್ಟೆ ಇಡಲು ಸುರಕ್ಷಿತ ಜಾಗವನ್ನು ಅರಸಿ ಮನೆಯ ಬಳಿ ಸುಳಿದಾಡಿದೆ ಎನ್ನಲಾಗ್ತಿದೆ. ಸವಣಾಲಿನಲ್ಲಿ ಕಂಡು ಬಂದ ದೊಡ್ಡ ಗಾತ್ರದ ಉಡ ಇದಾಗಿದೆ. ಅಳಿವಿನಂಚಿನಲ್ಲಿರುವ ಈ ಜೀವಿಯನ್ನು ಜನತೆ ಕೊಲ್ಲದೆ, ರಕ್ಷಿಸಬೇಕಿದೆ.