ಕರ್ನಾಟಕ

karnataka

ETV Bharat / state

ಜಮೀನು ಅತಿಕ್ರಮಣ ಆರೋಪ: ಮೂರು ದಿನದಿಂದ ಉಪವಾಸ ಸತ್ಯಾಗ್ರಹ - Anekkallu Agro Trading Service Co-operative Society

ಏನೆಕಲ್ಲು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯಿಂದ ತಮ್ಮ ಜಮೀನನ್ನು ಅತಿಕ್ರಮಣ ಮಾಡಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಪಿ.ಆರ್.ಯಶೋಚಂದ್ರ ಆರೋಪಿಸಿದ್ದಾರೆ.

ಜಮೀನು ಅತಿಕ್ರಮಣ ಅರೋಪ,  Land encroachment
ಜಮೀನು ಅತಿಕ್ರಮಣ ಅರೋಪ

By

Published : Jan 2, 2020, 8:40 PM IST

ದಕ್ಷಿಣ ಕನ್ನಡ: ಕಡಬ ತಾಲೂಕಿನ ಏನೆಕಲ್ಲು ಗ್ರಾಮದ ಪಿ.ಆರ್.ಯಶೋಚಂದ್ರ ಎಂಬುವರು ಕಳೆದ ಮೂರು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ.

ಏನೆಕಲ್ಲು ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯಿಂದ ತಮ್ಮ ಜಮೀನನ್ನು ಅತಿಕ್ರಮಣ ಮಾಡಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಕೃಷಿ ಪತ್ತಿನ ಸೇವಾ ಸಹಕಾರಿ ಸಂಘದ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತಿದ್ದಾರೆ.

ಜಮೀನು ಅತಿಕ್ರಮಣ ಆರೋಪ

ಏನೆಕಲ್ಲು ಸೇವಾ ಸಹಕಾರಿ ಸಂಘದ ಸ್ಥಾಪಕರಾದ ನನ್ನ ತಂದೆ ದಿವಂಗತ ಪಿ.ಎಸ್.ರಾಮಣ್ಣ ಮಾಸ್ಟರ್ ಅವರು ಸಂಘಕ್ಕೆ ಆರಂಭದಲ್ಲಿ ಸ್ವಂತ ಕಟ್ಟಡ ಇಲ್ಲದ ಕಾರಣ ನಮ್ಮ ಮನೆಯಲ್ಲೇ ಅವಕಾಶ ಕೊಟ್ಟು ಸಂಘದ ಕೆಲಸಗಳನ್ನು ಮಾಡಲು ಅನುವು ಮಾಡಿ ಕೊಟ್ಟಿದ್ದರು. ಈಗ ಈ ಸ್ಥಳ ನಮ್ಮದೇ ಎಂದು ಆಡಳಿತ ಮಂಡಳಿಯು ಜಮೀನನ್ನು ಅತಿಕ್ರಮಣ ಮಾಡಿದೆ ಎಂದು ಆರೋಪ ಮಾಡಿದರು.

ಮೂರು ದಿನದಿಂದ ಸತ್ಯಾಗ್ರಹ ಮಾಡುತ್ತಿದ್ದರೂ ಕೂಡ ಯಾವುದೇ ಅಧಿಕಾರಿಗಳು ಸ್ಥಳಕ್ಕೆ ಬಂದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ABOUT THE AUTHOR

...view details