ಬೆಳ್ತಂಗಡಿ:ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದೇಗುಲದ ಆನೆ ಲಕ್ಷ್ಮೀ ಮುದ್ದಾದ ಹೆಣ್ಣು ಮರಿಯಾನೆಗೆ ಜನ್ಮ ನೀಡಿದ್ದಾಳೆ.
ಧರ್ಮಸ್ಥಳ: ಹೆಣ್ಣು ಮರಿಯಾನೆಗೆ ಜನ್ಮ ನೀಡಿದ ಲಕ್ಷ್ಮೀ - ಶ್ರೀ ಕ್ಷೇತ್ರ ಧರ್ಮಸ್ಥಳ
2009ರಲ್ಲಿ ಧರ್ಮಸ್ಥಳದ ಮಂಜುನಾಥ ಸ್ವಾಮಿ ದೇವಾಲಯಕ್ಕೆ ಆಗಮಿಸಿದ್ದ ಲಕ್ಷ್ಮೀ ಆನೆ ಇಂದು ಹೆಣ್ಣು ಮರಿಯಾನೆಗೆ ಜನ್ಮ ನೀಡಿದೆ.
ಹೆಣ್ಣು ಮರಿಗೆ ಜನ್ಮ ನೀಡಿದ ಧರ್ಮಸ್ಥಳದ ಆನೆ
ಲಕ್ಷ್ಮೀ ಆನೆಯನ್ನು ವಿಜಯನಗರ ಶಾಸಕ ಆನಂದ್ ಸಿಂಗ್ ಅವರು 2009ರಲ್ಲಿ ಧರ್ಮಸ್ಥಳ ದೇಗುಲಕ್ಕೆ ಕೊಡುಗೆಯಾಗಿ ನೀಡಿದ್ದರು. ಇದೀಗ ಆನೆ ಲಕ್ಷ್ಮೀ ಮರಿಯೊಂದಕ್ಕೆ ಜನ್ಮ ನೀಡಿರುವುದು ಎಲ್ಲರ ಸಂತೋಷಕ್ಕೆ ಕಾರಣವಾಗಿದೆ. ಮಾವುತರು ಆನೆಯ ಆರೈಕೆಯಲ್ಲಿ ತೊಡಗಿದ್ದಾರೆ.