ಕರ್ನಾಟಕ

karnataka

ETV Bharat / state

ಪುತ್ತೂರು: ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ - ಮಹಾಲಿಂಗೇಶ್ವರ ದೇವಸ್ಥಾನ

ಪುತ್ತೂರಿನ ಇತಿಹಾಸ ಪ್ರಸಿದ್ಧ ಮಹಾತೋಭಾರ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಸಂಭ್ರಮದಿಂದ ನಡೆಯಿತು.

Lakshdeepotsava at Mahalingeshwar Temple
ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

By ETV Bharat Karnataka Team

Published : Dec 13, 2023, 2:50 PM IST

Updated : Dec 14, 2023, 11:52 AM IST

ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ

ಪುತ್ತೂರು:ಇತಿಹಾಸ ಪ್ರಸಿದ್ಧ ಮಹತೋಭಾರ ಪುತ್ತೂರು ಮಹಾಲಿಂಗೇಶ್ವರ ದೇವಾಲಯದಲ್ಲಿ ಮಂಗಳವಾರ ಲಕ್ಷ ದೀಪೋತ್ಸವವು ದೇವಳದ ತಂತ್ರಿ ಬ್ರಹ್ಮಶ್ರೀ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ನಡೆಯಿತು. ಸಂಪ್ರದಾಯದಂತೆ ದೇವರ ಉತ್ಸವಗಳೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವೈಭವದಿಂದ ನಡೆದವು.

ಬೆಳಗ್ಗೆ ಲಕ್ಷ ಬಿಲ್ವಾರ್ಚಣೆ, ರಾತ್ರಿ ದೇವಳದ ರಥ ಬೀದಿ ಉದ್ದಕ್ಕೂ ಹಣತೆ ಬೆಳಕು ಕಂಗೊಳಿತು. ರಥ ಬೀದಿಯ ಉದ್ದಕ್ಕೂ ರಂಗೋಲಿ ಹಾಕಲಾಗಿತ್ತು. ಅದರ ಮೇಲೆ ಹಣತೆಯ ಬೆಳಕು ಪ್ರಜ್ವಲಿಸುತ್ತಿತ್ತು. ಪಕ್ಕದಲ್ಲಿ ಭಜನಾ ಸತ್ಸಂಗ ಕಾರ್ಯಕ್ರಮ ನಡೆಯಿತು. ದೀಪ ಪ್ರಜ್ವಲನೆ ಬಳಿಕ ದೇವರ ಬಲಿ ಉತ್ಸವ, ಬಂಡಿ ಉತ್ಸವ, ತೆಪ್ಪೋತ್ಸವ ನಡೆಯಿತು.

ಬೆಳಿಗ್ಗೆ ಲಕ್ಷ ಬಿಲ್ವಾರ್ಚಣೆ ನಡೆದ ಬಳಿಕ ಸಂಜೆ ಪ್ರಮುಖವಾಗಿ ಧಾರ್ಮಿಕ ಶಿಕ್ಷಣ ಯೋಜನೆಯ ವಿದ್ಯಾರ್ಥಿಗಳಿಂದ ಮಹಾಲಿಂಗೇಶ್ವರ ದೇವರಿಗೆ ದೀಪ ನಮನ ಹಾಗೂ ಧಾರ್ಮಿಕ ಸತ್ಸಂಗವು ಶ್ಲೋಕ, ಭಜನೆ ಜರುಗಿತು. ಬಳಿಕ ದೇವದಳ ಗೋಪುರದಲ್ಲಿ ಮಂಗಳೂರು ಕದ್ರಿ ಮಂಜುನಾಥ ದೇವಸ್ಥಾನದ ಭಜನಾ ಮಂಡಳಿಯಿಂದ ಭಜನಾ ಕಾರ್ಯಕ್ರಮ ನರೆವೇರಿತು.

ಲಕ್ಷ ದೀಪೋತ್ಸವ

ದೇವಳದ ರಥ ಬೀದಿಯಲ್ಲಿ ಕಂಗೊಳಿಸಿದ ವರ್ಣರಂಜಿತ ರಂಗೋಲಿಗಳ ಮೇಲೆ ಹಣತೆ ಇಟ್ಟು ದೀಪ ಪ್ರಜ್ವಲನೆ ಜರುಗಿತು. ಬ್ರಹ್ಮಶ್ರೀ ವೇ. ಮೂ. ಗುರು ತಂತ್ರಿ ಅವರು ರಥ ಬೀದಿಯಲ್ಲಿ ಬಾಳೆದಿಂಡಿನ ಧಳಿಯಲ್ಲಿರಿಸಿದ ಹಣತೆಗೆ ಬೆಳಗಿಸಿ ಲಕ್ಷ ದೀಪೋತ್ಸವಕ್ಕೆ ಚಾಲನೆ ನೀಡಿದರು. ರಥ ಬೀದಿ ಉದ್ದಕ್ಕೂ ಭಕ್ತರು ಹಣತೆ ಬೆಳಗಿಸಿದರು. ಎಣ್ಣೆ ಮತ್ತು ಬತ್ತಿಯನ್ನು ದೇವಳದ ವತಿಯಿಂದ ನೀಡಲಾಗಿತ್ತು. ಕುಂಬಾರರ ಗುಡಿ ಕೈಗಾರಿಕಾ ಸಂಘದಿಂದ ಕಡಿಮೆ ದರಲ್ಲಿ ಹಣತೆ ವಿತರಣೆ ನಡೆಯಿತು. ದೇವಳದ ನಿತ್ಯ ಕರಸೇವಕರು ರಥ ಬೀದಿಯಲ್ಲಿ ಹಣತೆ ಬೆಳಗಿಸುವ ಕಾರ್ಯಕ್ಕೆ ಸಹಕಾರ ನೀಡಿದರು. ಪರಿಚಾರಕರು ಸಂಪ್ರದಾಯ ಉತ್ಸವದ ಕಾರ್ಯದಲ್ಲಿ ಭಾಗಿಯಾಗಿದ್ದರು.

ನಿನ್ನೆ ರಾತ್ರಿ ದೇವರ ಪೂಜೆಯ ಬಳಿಕ ದೇವರ ಉತ್ಸವ ಬಲಿ ಹೊರಟು, ಒಳಾಂಗಣ ಹಾಗೂ ಹೊರಾಂಗಣದಲ್ಲಿ ತಂತ್ರ ಸುತ್ತು, ರಾಜಾಂಗಣದಲ್ಲಿ ಉಡಿಕೆ ಸುತ್ತು, ಚೆಂಡೆ ಸುತ್ತು ಜರುಗಿತು. ಖಂಡನಾಯಕನ ಕಟ್ಟೆಯಲ್ಲಿ ಕಟ್ಟೆ ಪೂಜೆಯ ನಂತರ, ವಾದ್ಯ, ಭಜನೆ, ಬ್ಯಾಂಡ್, ಸರ್ವವಾದ್ಯ ಸುತ್ತುಗಳು ನಡೆದು ಚಂದ್ರಮಂಡಲ ಉತ್ಸವ ಮತ್ತು ತೆಪ್ಪೋತ್ಸವ ನಡೆಯಿತು.

ದೇವಳದ ಪ್ರಧಾನ ಅರ್ಚಕ ವೇ. ಮೂ. ವಸಂತ ಕೆದಿಲಾಯ, ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೇಶಪ್ರಸಾದ್ ಮುಳಿಯ, ಸದಸ್ಯರಾದ ಶೇಖರ್ ನಾರಾವಿ, ಬಿ.ಐತ್ತಪ್ಪ ನಾಯ್ಕ್, ಡಾ.ಸುಧಾ ಎಸ್.ರಾವ್, ರವೀಂದ್ರನಾಥ ರೈ ಬಳ್ಳಮಜಲು, ರಾಮಚಂದ್ರ ಕಾಮತ್, ರಾಮದಾಸ್ ಗೌಡ, ಬಿ.ಕೆ.ವೀಣಾ, ಮಾಜಿ ಶಾಸಕ ಸಂಜೀವ ಮಠಂದೂರು, ಕಾರ್ಯನಿರ್ವಹಣಾಧಿಕಾರಿ ಕೆ.ವಿ.ಶ್ರೀನಿವಾಸ್, ಕಚೇರಿ ವ್ಯವಸ್ಥಾಪಕ ಹರೀಶ್ ಶೆಟ್ಟಿ, ದೇವಳದ ವ್ಯವಸ್ಥಾಪನಾ ಸಮಿತಿ ಸದಸ್ಯರು ಮತ್ತು ಪ್ರಧಾನ ಅರ್ಚಕರು ಆಗಿರುವ ವೇ. ಮೂ. ವಿ.ಎಸ್ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಚನಿಲ ತಿಮ್ಮಪ್ಪ ಶೆಟ್ಟಿ, ರಾಜೇಶ್ ಬನ್ನೂರು, ಉದ್ಯಮಿ ಸೀತಾರಾಮ ರೈ ಕೆದಂಬಾಡಿಗುತ್ತು ಹಾಗೂ ಇತರರು ಉಪಸ್ಥಿತರಿದ್ದರು.

ಇದನ್ನೂ ಓದಿ:ಬೆಳಗಾವಿ: ಮತ್ತೊಂದು ಅಮಾನವೀಯ ಘಟನೆ; ಆಸ್ತಿ ವಿವಾದಕ್ಕೆ ವಿಕಲಚೇತನನ ಮನೆ ಧ್ವಂಸ ಆರೋಪ

Last Updated : Dec 14, 2023, 11:52 AM IST

ABOUT THE AUTHOR

...view details