ಮಂಗಳೂರು:ಕಾರ್ತಿಕ ಮಾಸವೆಂದರೆ ದೀಪಗಳ ಹಬ್ಬ. ಎಲ್ಲೆಡೆ ದೀಪೋತ್ಸವದ ಸಂಭ್ರಮ. ಧರ್ಮಸ್ಥಳದಲ್ಲಿ ಕಾರ್ತಿಕ ಮಾಸದಲ್ಲಿ ನಡೆಯುವ ಶ್ರೀ ಮಂಜುನಾಥ ಸ್ವಾಮಿಯ ಲಕ್ಷ ದೀಪೋತ್ಸವ ಕಾರ್ಯಕ್ರಮಗಳು 22 ರಿಂದ ಆರಂಭವಾಗಿದ್ದು, ನಾಳೆ (ನ. 27) ಸಂಪನ್ನಗೊಳ್ಳಲಿದೆ.
ಧರ್ಮಸ್ಥಳದಲ್ಲಿ ಲಕ್ಷದೀಪೋತ್ಸವದ ಸಂಭ್ರಮ...! ಜಗಮಗಿಸುವ ದೀಪಗಳಲ್ಲಿ ಕಂಗೊಳಿಸಿದ ಮಂಜುನಾಥನ ಆಲಯ - Lakhs of bonfire celebrations in dharmastala
ಧರ್ಮಸ್ಥಳದಲ್ಲಿ ಐದು ದಿನಗಳಿಂದ ನಡೆಯುತ್ತಿದ್ದ ಲಕ್ಷ ದೀಪೋತ್ಸವ ಕಾರ್ಯಕ್ರಮ ನಾಳೆ (ನ.27)ರಂದು ಸಂಪನ್ನಗೊಳ್ಳಲಿದೆ. ವಿವಿಧ ಉತ್ಸವ ಹಾಗೂ ದೀಪಾಲಂಕಾರ ಆಕರ್ಷನೀಯವಾಗಿತ್ತು.
ರಾತ್ರಿ 12 ಗಂಟೆ ಬಳಿಕ ನಡೆಯುವ ಲಕ್ಷದೀಪೋತ್ಸವಕ್ಕೆ ನಾಡಿನೆಲ್ಲೆಡೆಯಿಂದ ಲಕ್ಷಾಂತರ ಭಕ್ತರು ಭಾಗಿಯಾಗುತ್ತಾರೆ. ಐದು ದಿನಯುವ ವಿಶೇಷ ಕಾರ್ಯಕ್ರಮ, ಪೂಜೆ ಹಾಗೂ ವೈವಿಧ್ಯಮಗಳ ದೀಪಾಲಂಕಾರವು ಆಕರ್ಷಣೀಯವಾಗಿದೆ. ದೇವಸ್ಥಾನವು ಸಂಪೂರ್ಣವಾಗಿ ದೀಪಗಳಿಂದ ರಾರಾಜಿಸುತ್ತಿದ್ದು, ನವ ವಧುವಿನಂತೆ ಸಿಂಗಾರಗೊಂಡು ಎಲ್ಲರ ಆಕರ್ಷಣೆಗೆ ಒಳಗಾಗಿದೆ.
ಲಕ್ಷದೀಪೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಹಲವಾರು ಉತ್ಸವಗಳು ವಿಜೃಂಭನೆಯಿಂದ ಸಾಗಿದೆ. ವರ್ಷ ಪೂರ್ತಿ ಮಂಜುನಾಥ ಸ್ವಾಮಿಯು ದೇವಳದ ಒಳಗೆ, ಭಕ್ತರಿಗೆ ದರ್ಶನ ನೀಡಿದರೆ ಲಕ್ಷ ದೀಪೋತ್ಸವದ ಐದು ದಿನಗಳಲ್ಲಿ ದೇವಳದಿಂದ ಹೊರಬಂದು ವಿಶೇಷವಾದ ಪಲ್ಲಕ್ಕಿ ಉತ್ಸವದೊಂದಿಗೆ ಕೆರೆಕಟ್ಟೆ ಉತ್ಸವ, ಹೊಸಕಟ್ಟೆ ಉತ್ಸವ, ಲಲಿತೋದ್ಯಾನ ಉತ್ಸವ ಮುಂತಾದ ಉತ್ಸವಗಳ ಮೂಲಕ ಭಕ್ತರಿಗೆ ದರ್ಶಶ ನೀಡುತ್ತಾನೆ.