ಮಂಗಳೂರು : ನಗರದಲ್ಲಿನ 12 ಕೊರೊನಾ ಸೋಂಕಿತರಲ್ಲಿ ಆರು ಮಂದಿ ಗುಣಮುಖರಾಗಿ ಮನೆ ಸೇರಿದ್ದರೂ ಲಾಕ್ ಡೌನ್ ಮಾತ್ರ ಹಾಗೆಯೇ ಮುಂದುವರಿದಿದೆ. ಜಿಲ್ಲಾಡಳಿತದ ಕರೆಗೆ ಸಂಪೂರ್ಣ ಜನರು ಬೆಂಬಲ ನೀಡುತ್ತಿದ್ದು, ಅಗತ್ಯ ವಸ್ತುಗಳ ಖರೀದಿಗಷ್ಟೇ ಮನೆಯಿಂದ ಹೊರ ಬರುತ್ತಿದ್ದಾರೆ.
ಮಂಗಳೂರಿನಲ್ಲಿ ಬಂದ್ ನಿರಾತಂಕ: ಜನರಿಂದ ಉತ್ತಮ ಸ್ಪಂದನೆ - mangalore corona news
ಮಂಗಳೂರಿನಲ್ಲಿ ಕಂಡುಬಂದ 12 ಕೊರೊನಾ ಪಾಸಿಟಿವ್ ಪ್ರಕರಣಗಳಲ್ಲಿ ಈಗಾಗಲೇ 6 ಮಂದಿ ಗುಣಮುಖರಾಗಿದ್ದಾರೆ.
ಬೆಳಗ್ಗೆ 7 ರಿಂದ 12 ರವರೆಗೆ ಮಾತ್ರ ಜನರಿಗೆ ಅಗತ್ಯ ಸಾಮಾಗ್ರಿ ಖರೀದಿಗೆ ಅವಕಾಶ ನೀಡಿದ್ದು, ಆ ಬಳಿಕ ಸಂಪೂರ್ಣ ಬಂದ್ ಮಾಡಲಾಗುತ್ತಿದೆ. ಪರಿಣಾಮ ನಗರದ ಎಲ್ಲಾ ರಸ್ತೆಗಳು ಜನ ಸಂಚಾರ, ವಾಹನ ಸಂಚಾರವಿಲ್ಲದೆ ಬಿಕೋ ಎನ್ನುತ್ತಿವೆ. ಆದರೆ ವೈದ್ಯಕೀಯ ಸೌಲಭ್ಯ, ಪೆಟ್ರೋಲ್ ಬಂಕ್, ದಿನಸಿ ಸಾಮಾಗ್ರಿಗಳ ಸರಬರಾಜು ವಾಹನಗಳಿಗೆ ಮಾತ್ರ ವಿನಾಯಿತಿ ನೀಡಲಾಗಿದೆ.
ಪಾಸ್ ಇರುವವರು, ಸರ್ಕಾರಿ ಅಧಿಕಾರಿಗಳು, ವೈದ್ಯ ವೃತ್ತಿಯವರಿಗೂ ವಿನಾಯಿತಿ ಇದೆ. ಪೊಲೀಸರು ಈ ಬಗ್ಗೆ ಅಲ್ಲಲ್ಲಿ ನಾಕಾ ಬಂದಿ ವ್ಯವಸ್ಥೆ ಅಣಿಗೊಳಿಸಿ ಪೊಲೀಸರು ಎಲ್ಲರನ್ನೂ ತಪಾಸಣೆ ಮಾಡುತ್ತಿದ್ದಾರೆ. ಈ ಸಂದರ್ಭ ಅನಗತ್ಯ ಸಂಚರಿಸುವವರ ಮೇಲೆ ಪ್ರಕರಣ ದಾಖಲಿಸಿ, ವಾಹನವನ್ನು ಜಪ್ತಿ ಮಾಡುತ್ತಿದ್ದಾರೆ.