ಮಂಗಳೂರು:ಡಿಸೇಲ್ಗೆ ಅನುದಾನ ನೀಡದ ಹಿನ್ನೆಲೆಯಲ್ಲಿ ಲೇಡಿಗೋಷನ್ ಆಸ್ಪತ್ರೆಗೆ ಸೇರಿದ ನಗು ಮಗು ಆ್ಯಂಬುಲೆನ್ಸ್ ಒಂದು ವಾರದಿಂದ ಸ್ಥಗಿತಗೊಂಡಿದೆ.
ಡೀಸೆಲ್ಗೂ ಕಾಸಿಲ್ಲದೆ ವಾರದಿಂದ ಶೆಡ್ನಲ್ಲಿ ನಿಂತಿದೆ ನಗುಮಗು ಆಂಬ್ಯುಲೆನ್ಸ್! - -ladygotion-hospital update
ಡಿಸೇಲ್ಗೆ ಅನುದಾನ ನೀಡದ ಹಿನ್ನೆಲೆಯಲ್ಲಿ ಲೇಡಿಗೋಷನ್ ಆಸ್ಪತ್ರೆಗೆ ಸೇರಿದ ನಗು ಮಗು ಆ್ಯಂಬುಲೆನ್ಸ್ ಒಂದು ವಾರದಿಂದ ಸ್ಥಗಿತಗೊಂಡಿದೆ.

ಆಂಬ್ಯುಲೆನ್ಸ್ ಡೀಸೆಲ್ಗೆ ಅನುದಾನದ ಕೊರತೆಯುಂಟಾಗಿ ಶೆಡ್ನಲ್ಲಿ ವಾಹನವನ್ನು ಪಾರ್ಕ್ ಮಾಡಲಾಗಿದೆ. ಈಗ ಬಡವರು ದುಬಾರಿ ಬಾಡಿಗೆ ನೀಡಿ ಆ್ಯಂಬುಲೆನ್ಸ್ನಲ್ಲಿ ತೆರಳಬೇಕಾದ ಅನಿವಾರ್ಯತೆ ಉಂಟಾಗಿದೆ. ಈ ಬಗ್ಗೆ ಜನಪ್ರತಿನಿಧಿಗಳು ತಕ್ಷಣ ಸ್ಪಂದನೆ ನೀಡಿ ಅನುದಾನ ನೀಡಬೇಕಾಗಿದೆ.
ಈ ಬಗ್ಗೆ ಲೇಡಿಗೋಷನ್ ಆಸ್ಪತ್ರೆಯ ಅಧೀಕ್ಷಕಿ ಡಾ.ಸವಿತಾ ಬಿ.ಎಸ್.ಮಾತನಾಡಿ, ಲೇಡಿಗೋಷನ್ ಆಸ್ಪತ್ರೆಯ ಸುಮಾರು 60 ಸಾವಿರದಷ್ಟು ಡೀಸೆಲ್ ಬಿಲ್ ಬಾಕಿಯಾಗಿರುವುದರಿಂದ ಹಾಗೂ ಪೆಟ್ರೋಲ್ ಬಂಕ್ಗಳಿಂದ ಕ್ರೆಡಿಟ್ ರೂಪದಲ್ಲಿ ಪೆಟ್ರೋಲ್ ಸಿಗದಿರುವ ಕಾರಣ ನಗು ಮಗು ಆ್ಯಂಬುಲೆನ್ಸ್ ಸ್ಥಗಿತಗೊಳಿಸಲಾಗಿದೆ. ಈಗಾಗಲೇ ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿಗೆ ಈ ಬಗ್ಗೆ ಮನವಿ ಪತ್ರ ಸಲ್ಲಿಸಿದ್ದೇವೆ. ಅವರು ಈಗಾಗಲೇ ರಾಜ್ಯದ ನಿರ್ದೇಶಕರಿಗೆ ಈ ಮನವಿ ಪತ್ರವನ್ನು ಕಳುಹಿಸಿ ಕೊಟ್ಟಿದ್ದು, ಒಂದು ವಾರದೊಳಗೆ ಅನುದಾನ ಲಭ್ಯವಾಗುವ ಭರವಸೆಯಿದೆ. ಅನುದಾನ ದೊರಕಿದ ತಕ್ಷಣ ನಗು ಮಗು ಸೇವೆಯನ್ನು ಆರಂಭಿಸಲಾಗುವುದು ಎಂದು ಹೇಳಿದರು.