ಮಂಗಳೂರು: ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು (ಎಂಎಸ್ಎಂಇ) ಸಹಜಸ್ಥಿತಿಗೆ ಬರುತ್ತಿವೆಯಾದರೂ ಕಾರ್ಮಿಕರ ಕೊರತೆ ಕಾಡುತ್ತಿದೆ.
ಕರಾವಳಿ ಭಾಗದ ಕೈಗಾರಿಕೆಗಳಲ್ಲಿ ಕಾಡುತ್ತಿದೆ ಕಾರ್ಮಿಕರ ಕೊರತೆ - ದಕ್ಷಿಣ ಕನ್ನಡ ಜಿಲ್ಲೆ ಸುದ್ದಿ
ಲಾಕ್ಡೌನ್ ಸಂದರ್ಭದಲ್ಲಿ ಊರಿಗೆ ತೆರಳಿದ್ದ ಸಾವಿರಾರು ವಲಸೆ ಕಾರ್ಮಿಕರ ಪೈಕಿ ಅರ್ಧ ಭಾಗದಷ್ಟು ಮಂದಿ ಮಾತ್ರ ಮರಳಿದ್ದಾರೆ. ಹೀಗಾಗಿ, ಕರಾವಳಿ ಭಾಗದ ಕೈಗಾರಿಕೆಗಳಲ್ಲಿ ಕಾರ್ಮಿಕರ ಅಭಾವ ಹೆಚ್ಚಾಗಿದೆ.
ಕೈಗಾರಿಕೆಗಳಲ್ಲಿ ಕಾರ್ಮಿಕರ ಅಭಾವ
ಲಾಕ್ಡೌನ್ನಲ್ಲಿ ಕರಾವಳಿ ಭಾಗದ ಕೈಗಾರಿಕೆಗಳಲ್ಲಿ ದುಡಿಯುತ್ತಿದ್ದ ಸಾವಿರಾರು ವಲಸೆ ಕಾರ್ಮಿಕರು ಊರಿಗೆ ತೆರಳಿದ್ದರು. ಅದರಲ್ಲಿ ಕೆಲವರು ಮಾತ್ರ ಮರಳಿದ್ದಾರೆ. ಇನ್ನು ಕೆಲ ಕೈಗಾರಿಕೆಗಳು ಅಗತ್ಯ ಕಾರ್ಮಿಕರನ್ನಷ್ಟೇ ಬಳಸಿಕೊಂಡಿವೆ.
ಕೊರೊನಾ ಬಳಿಕ ಸ್ಥಬ್ಧವಾಗಿದ್ದ ಕೈಗಾರಿಕೆಗಳ ಪೈಕಿ ಶೇ.60ರಷ್ಟು ಮಾತ್ರ ಪುನಾರಂಭಗೊಂಡಿವೆ. ಇಲ್ಲಿನ ಗೋಡಂಬಿ ಕಾರ್ಖಾನೆಗಳು ವಿಷಯಕ್ಕೆ ಕಚ್ಚಾ ವಸ್ತುಗಳ ಕೊರತೆ ಹೆಚ್ಚಾಗಿದೆ. ಮತ್ತೊಂದೆಡೆ ಕಚ್ಚಾ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ತಲೆ ನೋವಾಗಿದೆ.