ಮಂಗಳೂರು :ಉದ್ಯೋಗಕ್ಕೆಂದು ತೆರಳಿ ಕುವೈತ್ನಲ್ಲಿ ವಂಚನೆಗೊಳಗಾಗಿ ಅತಂತ್ರ ಪರಿಸ್ಥಿತಿಯಲ್ಲಿದ್ದ ಕರಾವಳಿಯ 19 ಮಂದಿ ತಾಯ್ನಾಡಿಗೆ ಮರಳಿದ್ದು, ಬಿಜೆಪಿ ಮುಖಂಡರಾದ ರವಿಶಂಕರ್ ಮಿಜಾರ್, ನಿತಿನ್ ಕುಮಾರ್, ಹನುಮಂತ ಕಾಮತ್, ನರೇಶ್ ಶೆಣೈ ಮತ್ತಿತರರು ಸ್ವಾಗತಿಸಿದರು.
ಕುವೈತ್ನಲ್ಲಿ ವಂಚನೆಗೊಳಗಾಗಿ ಅತಂತ್ರ ಸ್ಥಿತಿಯಲ್ಲಿದ್ದ 19 ಮಂದಿ ತಾಯ್ನಾಡಿಗೆ - Kannada news
ಏಜೆನ್ಸಿಯಿಂದಾದ ನಷ್ಟದ ಬಗ್ಗೆ ನಾವು ಮೊದಲಿಗೆ ಶಾಸಕ ವೇದವ್ಯಾಸ ಕಾಮತ್ ರವರಲ್ಲಿ ಮಾತನಾಡಿ ಮುಂದಿನ ಹೆಜ್ಜೆ ಇರಿಸಲಿದ್ದೇವೆ. ಕಾನೂನು ಹೋರಾಟ ನಡೆಸುವ ಉದ್ದೇಶ ಇರಿಸಿಕೊಂಡಿದ್ದೇವೆ. ಏಕೆಂದರೆ ನಮಗೆ ಸಹಾಯ ಮಾಡುತ್ತೇವೆ, ಫ್ಲೈಟ್ ಟಿಕೆಟ್ಗೆ ಸಹಾಯ ಮಾಡುತ್ತೇವೆ ಎಂದು ಹೇಳಿ ಕೈ ಕೊಟ್ಟರು-ನೊಂದವರು.
ಈ ಸಂದರ್ಭ ಜಲ್ಲಿಗುಡ್ಡೆ ನಿವಾಸಿ ಅಬೂಬಕರ್ ಸಿದ್ದೀಕ್ ಸುದ್ದಿಗಾರರೊಂದಿಗೆ ಮಾತನಾಡಿ, ಕುವೈತ್ನಲ್ಲಿ ನಮ್ಮ ಸ್ಥಿತಿ ದಯನೀಯವಾಗಿತ್ತು. ಜನವರಿ 2019ಕ್ಕೆ ಕವೈತ್ ತಲುಪಿದ್ದೆವು, ಮಾಣಿಕ್ಯ ಕನ್ಸಲ್ಟೆನ್ಸಿಯವರು ಕಂಪೆನಿ ಬಗ್ಗೆ ತಿಳಿಯದೆ ನಮ್ಮನ್ನು ಉದ್ಯೋಗಕ್ಕೆ ಕಳುಹಿಸಿಕೊಟ್ಟರು. ಸಂದರ್ಶನದ ವೇಳೆ ಹೇಳಿದ ಕಂಪೆನಿಯಲ್ಲಿ ನಮಗೆ ಉದ್ಯೋಗ ಇರಲಿಲ್ಲ. ನಮ್ಮನ್ನು ಕೆಲಸಕ್ಕೆ ಸೇರಿಸಿದ ಕಂಪೆನಿಯೇ ಬೇರೆಯಾಗಿತ್ತು. ನಾವು ಅಲ್ಲಿ 9 ತಿಂಗಳು ದುಡಿದರು ಒಂದು ರೂಪಾಯಿಯನ್ನು ಸಂಪಾದಿಸಲಿಲ್ಲ. ಅಲ್ಲಿ ಜೀವನ ಬಹಳ ಕಷ್ಟದಾಯಕವಾಗಿತ್ತು ಎಂದರು.
ಅದಕ್ಕೆ ನಾವು ಶಾಸಕ ವೇದವ್ಯಾಸ್ ಕಾಮತ್ ಅವರಿಗೆ ನಮ್ಮ ಸಮಸ್ಯೆ ತಲುಪಬೇಕೆಂಬ ಉದ್ದೇಶದಿಂದ ನಮ್ಮ ಅಲ್ಲಿನ ಪರಿಸ್ಥಿತಿಯನ್ನು ವಿವರಿಸಿ ವಿಡಿಯೊವೊಂದನ್ನು ವೈರಲ್ ಮಾಡಿದೆವು. ಅವರು ನಮಗೆ ತುಂಬಾ ಸಹಾಯ ಮಾಡಿದ್ದಾರೆ. ಹಾಗೆಯೇ ಅಲ್ಲಿನ ಅಸೋಸಿಯೇಷನ್ನವರು, ಮೋಹನ್ ದಾಸ್ ಕಾಮತ್, ರಾಜೇಶ್ ಭಂಡಾರಿ, ಕೆಕೆಎಂನ ನೌಶಾದ್, ಮಾಬಿ, ಮಾಧವ ನಾಯ್ಕ್, ವಿಜಯ್ ಫರ್ನಾಂಡೀಸ್, ಕೆಸಿಎಫ್ನ ಹುಸೈನ್ ಎರ್ಮಾಳ್, ಅಹ್ಮದ್ ಬಾವಾ, ತುಳುಕೂಟದವರು ಹೀಗೆ ಪ್ರತಿಯೊಬ್ಬರ ಪರಿಶ್ರಮದಿಂದ ಇಂದು ನಾವು ನಮ್ಮ ತಾಯ್ನಾಡಿಗೆ ಮರಳಲು ಸಾಧ್ಯವಾಯಿತು ಎಂದು ಹೇಳಿದರು.
ಇನ್ನೂ 11 ಮಂದಿ ಇನ್ನೂ ಅಲ್ಲಿಯೇ ಬಾಕಿಯಾಗಿದ್ದಾರೆ. ಅದರಲ್ಲಿ ಮೂವರಿಗೆ ವ್ಯವಸ್ಥೆ ಆಗಿದೆ. ಅವರು ಆಗಸ್ಟ್ 1 ಅಥವಾ 2 ರಂದು ಮಂಗಳೂರು ತಲುಪಲಿದ್ದಾರೆ. ಆದರೆ 8 ಮಂದಿ ಇನ್ನೂ ಸಮಸ್ಯೆಯಲ್ಲಿ ಸಿಲುಕಿದ್ದಾರೆ. ಅವರಿಗೆ ದಂಡ ಕಟ್ಟಲು ಹಣದ ಅವಶ್ಯಕತೆ ಇದೆ. ಒಬ್ಬೊಬ್ಬರಿಗೂ ಭಾರತೀಯ ಹಣ ಸುಮಾರು 70-80 ಸಾವಿರ ದಷ್ಟು ದಂಡ ಕಟ್ಟಬೇಕಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಏಜೆನ್ಸಿಯಿಂದಾದ ನಷ್ಟದ ಬಗ್ಗೆ ನಾವು ಮೊದಲಿಗೆ ಶಾಸಕ ವೇದವ್ಯಾಸ ಕಾಮತ್ ರವರಲ್ಲಿ ಮಾತನಾಡಿ ಮುಂದಿನ ಹೆಜ್ಜೆ ಇರಿಸಲಿದ್ದೇವೆ. ಕಾನೂನು ಹೋರಾಟ ನಡೆಸಲು ಉದ್ದೇಶ ಇರಿಸಿಕೊಂಡಿದ್ದೇವೆ. ಏಕೆಂದರೆ ನಮಗೆ ಸಹಾಯ ಮಾಡುತ್ತೇವೆ, ಫ್ಲೈಟ್ ಟಿಕೆಟ್ ಗೆ ಸಹಾಯ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ ಯಾವ ಸಹಾಯವನ್ನು ಅವರು ನಮಗೆ ಮಾಡಿಲ್ಲ. ಪೊಲೀಸ್ ಇಲಾಖೆಯು ನಮಗೆ ಸಹಾಯ ಮಾಡಿಲ್ಲ ಎಂದು ನೋವು ಹೇಳಿಕೊಂಡರು.