ಕರ್ನಾಟಕ

karnataka

ETV Bharat / state

ಬೆಳ್ತಂಗಡಿ ತಾಲೂಕಿನ ನೆರೆ ಸಂತ್ರಸ್ತರಿಗೆ ಪರಿಹಾರ ಸಾಮಗ್ರಿ ವಿತರಿಸಿದ ಮಾಜಿ ಸಿಎಂ - h d kumaraswamy

ನೆರೆ ಹಾನಿಗೊಳಗಾದ ಬೆಳ್ತಂಗಡಿ ತಾಲೂಕಿನ ಚಾರ್ಮಾಡಿ ಮತ್ತು ದಿಡುಪೆ ಗ್ರಾಮಗಳಿಗೆ ಮಾಜಿ ಸಿಎಂ ಕುಮಾರಸ್ವಾಮಿ ಅಗತ್ಯ ವಸ್ತುಗಳನ್ನು ವಿತರಿಸಿದರು. ಜೆಡಿಎಸ್ ಪಕ್ಷದ ಮುಖಂಡರು ಮತ್ತು ಶಾಸಕರು ನೀಡಿದ ಕೊಡುಗೆಯನ್ನು ಸಂತ್ರಸ್ತರಿಗೆ ಹಂಚಿದರು.

hdk

By

Published : Aug 18, 2019, 7:13 PM IST

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ನೆರೆ ಹಾನಿಗೊಳಗಾದ ಚಾರ್ಮಾಡಿ ಮತ್ತು ದಿಡುಪೆ ಗ್ರಾಮಗಳಿಗೆ ಭೇಟಿ ನೀಡಿದ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಸಂತ್ರಸ್ತರಿಗೆ ಆಹಾರ ಸಾಮಗ್ರಿ, ಬಟ್ಟೆಗಳನ್ನು ನೀಡಿದರು.

ಜೆಡಿಎಸ್ ಪಕ್ಷದ ಮುಖಂಡರು ಮತ್ತು ಶಾಸಕರು ನೆರೆ ಸಂತ್ರಸ್ತರಿಗೆ ನೀಡಿದ ನೆರವಿನ ಕೊಡುಗೆಯನ್ನು ಕುಮಾರಸ್ವಾಮಿ ಸಂತ್ರಸ್ತರಿಗೆ ಹಂಚಿದರು. ಚಾರ್ಮಾಡಿ ಮತ್ತು ದಿಡುಪೆ ಗ್ರಾಮದ ನೆರೆ ಸಂತ್ರಸ್ತರಿಗೆ ದಾಸರಹಳ್ಳಿ ಶಾಸಕ ಆರ್ ಮಂಜುನಾಥ್ ಎರಡು ಲಾರಿಗಳಲ್ಲಿ ಕಳುಹಿಸಿದ ಸಾಮಗ್ರಿಗಳನ್ನು ಹಸ್ತಾಂತರಿಸಲಾಯಿತು.

ಅಗತ್ಯ ವಸ್ತುಗಳನ್ನು ವಿತರಿಸುತ್ತಿರುವ ಮಾಜಿ ಸಿಎಂ ಹೆಚ್​ಡಿಕೆ

ದಿಡುಪೆ ಮತ್ತು ಚಾರ್ಮಾಡಿ ಗ್ರಾಮದ ಸಂತ್ರಸ್ತರಿಗೆ 25 ಕೆ ಜಿ ಅಕ್ಕಿ, ದಿನಸಿ ಸಾಮಗ್ರಿ, ಚಾಪೆ, ಸೀರೆ, ಬೆಡ್ ಶೀಟ್, ನೀರಿನ ಬಾಟಲಿ, ಶೂ ಮೊದಲಾದ ಸಾಮಗ್ರಿಗಳನ್ನು ಕುಮಾರಸ್ವಾಮಿ ವಿತರಿಸಿದರು. ಈ ವೇಳೆ ಮಾಜಿ ಸಚಿವ ಸಾ. ರಾ,. ಮಹೇಶ್​ ಸೇರಿದಂತೆ ಪಕ್ಷದ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.

ABOUT THE AUTHOR

...view details