ಮಂಗಳೂರು: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಮತ್ತು ಸಂಪುಟ ನರಸಿಂಹ ಮಠಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ಪರಿಹಾರಕ್ಕೆ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಸಫಲವಾಗಿಲ್ಲ.
ಕುಕ್ಕೆಯಲ್ಲಿ ಸರ್ಪಸಂಸ್ಕಾರ ವಿವಾದ: ಫಲ ನೀಡದ ಪೇಜಾವರ ಶ್ರೀ ಸಂಧಾನ - kannadanews
ಕುಕ್ಕೆ ಸುಬ್ರಹ್ಮಣ್ಯದಲ್ಲಿ,ದೇವಸ್ಥಾನ ಮತ್ತು ಸಂಪುಟ ನರಸಿಂಹ ಮಠಕ್ಕೆ ಸಂಬಂಧಿಸಿದಂತೆ ಉಂಟಾಗಿರುವ ಗೊಂದಲ ಪರಿಹಾರಕ್ಕೆ ಪೇಜಾವರ ಶ್ರೀಗಳ ನೇತೃತ್ವದಲ್ಲಿ ನಡೆದ ಸಂಧಾನ ಸಭೆ ಫಲಪ್ರದವಾಗಿಲ್ಲ.
ಕುಕ್ಕೆ ಸುಬ್ರಹ್ಮಣ್ಯಕ್ಕೆ ಬಂದ ಪೇಜಾವರದ ವಿಶ್ವೇಶತೀರ್ಥ ಸ್ವಾಮೀಜಿ ಎರಡು ಕಡೆಯವರ ಅಭಿಪ್ರಾಯವನ್ನು ಪಡೆದರಾದರೂ ಒಮ್ಮತದ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ಆರಂಭದಲ್ಲಿ ಸಂಪುಟ ನರಸಿಂಹ ಮಠದ ಸ್ವಾಮೀಜಿಗಳ ಬಳಿ ಚರ್ಚೆ ನಡೆಸಿದ ಸ್ವಾಮೀಜಿ ಬಳಿಕ ದೇವಸ್ಥಾನದ ಪರ ಹೋರಾಟ ಮಾಡುವ ಭಕ್ತರ ಜೊತೆಗೆ ಸಮಾಲೋಚನೆ ನಡೆಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಆಡಳಿತ ಮಂಡಳಿಯ ಸದಸ್ಯರು ಇದ್ದರು. ಎರಡು ಕಡೆಯ ಅಭಿಪ್ರಾಯ ಕ್ರೋಢಿಕರಿಸಿದ ಸ್ವಾಮೀಜಿಗೆ ಒಮ್ಮತದ ನಿರ್ಣಯಕ್ಕೆ ಬರಲು ಸಾಧ್ಯವಾಗಿಲ್ಲ. ಬಳಿಕ ಜೂನ್ 10ರೊಳಗೆ ಮಂಗಳೂರಿನಲ್ಲಿ ಎರಡು ಕಡೆಯವರನ್ನು ಸೇರಿಸಿ ಸಭೆ ನಡೆಸಿ ಒಮ್ಮತದ ನಿರ್ಣಯಕ್ಕೆ ಬರಲು ನಿರ್ಧರಿಸಲಾಯಿತು.
ಕುಕ್ಕೆ ದೇವಸ್ಥಾನದಲ್ಲಿ ನಡೆಯುವ ಸರ್ಪಸಂಸ್ಕಾರ ಮತ್ತು ಇತರ ಸೇವೆಗಳನ್ನು ದೇವಾಲಯದ ಸನಿಹದಲ್ಲಿರುವ ಸಂಪುಟ ನರಸಿಂಹ ಮಠದಲ್ಲಿ ಮಾಡುವ ಕಾರಣ ಗೊಂದಲ ಏರ್ಪಟ್ಟಿದ್ದು, ಈ ವಿಚಾರದಿಂದ ಕಳೆದ ಹಲವು ವರ್ಷಗಳಿಂದ ಮಠ ಮತ್ತು ದೇವಸ್ಥಾನದ ನಡುವೆ ಕಂದಕ ಸೃಷ್ಟಿಯಾಗಿದೆ. ಇತ್ತೀಚೆಗೆ ಈ ವಿಚಾರ ತಾರಕಕ್ಕೇರಿ ಹಲ್ಲೆಯಂತ ಪ್ರಕರಣಗಳು ನಡೆದಿದೆ.