ಕರ್ನಾಟಕ

karnataka

ETV Bharat / state

ಸುಳ್ಯ ಅಗ್ನಿಶಾಮಕ ದಳಕ್ಕೆ ಮೋಟಾರ್ ಚಾಲಿತ ಬೋಟ್ ಕೊಡುಗೆ ನೀಡಿದ ಕುಕ್ಕೆ ಸುಬ್ರಹ್ಮಣ್ಯ ದೇಗುಲ - Kukke subramanya temple

ಈ ಹಿಂದೆ ಕರ್ನಾಟಕ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಕುಕ್ಕೆ ದೇವಸ್ಥಾನದಲ್ಲಿ ನಡೆಸಿದ ಪ್ರಗತಿ ಪರಿಶೀಲನೆ ಸಭೆಯ ವೇಳೆಯಲ್ಲಿ ನೆರೆ ಪರಿಹಾರ ಸಂದರ್ಭದಲ್ಲಿ ಸಹಾಯಕವಾಗಲೆಂದು ಬೋಟ್ ಖರೀದಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು..

Kukke Subramanya temple
Kukke Subramanya temple

By

Published : Aug 8, 2020, 3:41 PM IST

ಸುಬ್ರಹ್ಮಣ್ಯ :ತುರ್ತು ಸಮಯದಲ್ಲಿ ನೆರವಾಗುವ ಉದ್ದೇಶದಿಂದ ಸುಳ್ಯ ಅಗ್ನಿಶಾಮಕ ದಳಕ್ಕೆ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ಆಡಳಿತ ಮಂಡಳಿ ಮೋಟಾರ್ ಚಾಲಿತ ಬೋಟ್‌ನ ಕೊಡುಗೆಯಾಗಿ ನೀಡಿತು.

ಮಳೆಗಾಲದಲ್ಲಿ ಕುಮಾರಧಾರ ನದಿ ಉಕ್ಕಿ ಹರಿದು ಅನಾಹುತಗಳು ಸಂಭವಿಸುವ ಸಾಧ್ಯತೆಗಳಿವೆ. ಈ ಸಮಯದಲ್ಲಿ ಬೋಟ್ ಅಗತ್ಯತೆ ಹೆಚ್ಚಿರುತ್ತದೆ. ಇದನ್ನು ಮನಗಂಡ ಕುಕ್ಕೆ ಸುಬ್ರಮಣ್ಯ ಆಡಳಿತ ಮಂಡಳಿ ಸುಮಾರು 6.75 ಲಕ್ಷ ಮೌಲ್ಯದ ಬೋಟ್‌ ಖರೀದಿಸಿ ಸುಳ್ಯ ಅಗ್ನಿ ಶಾಮಕ ದಳದ ಅಧಿಕಾರಿಗಳಿಗೆ ನೀಡಿದೆ.

ಈ ಹಿಂದೆ ಕರ್ನಾಟಕ ಮುಜುರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಕುಕ್ಕೆ ದೇವಸ್ಥಾನದಲ್ಲಿ ನಡೆಸಿದ ಪ್ರಗತಿ ಪರಿಶೀಲನೆ ಸಭೆಯ ವೇಳೆಯಲ್ಲಿ ನೆರೆ ಪರಿಹಾರ ಸಂದರ್ಭದಲ್ಲಿ ಸಹಾಯಕವಾಗಲೆಂದು ಬೋಟ್ ಖರೀದಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎನ್ನಲಾಗುತ್ತಿದೆ.

ABOUT THE AUTHOR

...view details