ಸುಬ್ರಹ್ಮಣ್ಯ(ದಕ್ಷಿಣಕನ್ನಡ): ವಿಶ್ವವಿಖ್ಯಾತ ನಾಗಕ್ಷೇತ್ರ ಮಹತೋಭಾರ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಪೂರ್ವಶಿಷ್ಟ ಸಂಪ್ರದಾಯ ಪ್ರಕಾರ ಇದೇ ಶುಭಕೃತ್ ನಾಮ ಸಂವತ್ಸರದ ಕಾರ್ತಿಕ ಬಹುಳ ದ್ವಾದಶಿ ಸೋಮವಾರ ದಿನಾಂಕ 21-11-2022ರ ಲಾಗ್ಯಾತು ಮಾರ್ಗಶಿರ ಶುದ್ಧ ದ್ವಾದಶಿ ಸೋಮವಾರ ದಿನಾಂಕ 05-12-2022ರ ವರೆಗೆ ಈ ಕೆಳಗಿನಂತೆ ವಾರ್ಷಿಕ ಜಾತ್ರಾ ಉತ್ಸವಾದಿಗಳು ನಡೆಯಲಿವೆ.
ಭಗವತ್ಸಂಕಲ್ಪ ಪ್ರಕಾರ ನಡೆಯತಕ್ಕ ಈ ಮಹೋತ್ಸವಗಳಿಗೆ ಭಕ್ತರು ಆಗಮಿಸಿ, ಶ್ರೀ ದೇವರ ಮೂಲಮೃತ್ತಿಕಾ ಗಂಧ - ಪ್ರಸಾದವನ್ನು ಸ್ವೀಕರಿಸಿ, ಶ್ರೀ ಸುಬ್ರಹ್ಮಣ್ಯ ದೇವರ ಅನುಗ್ರಹಕ್ಕೆ ಪಾತ್ರರಾಗಬೇಕು ಎಂದು ದೇಗುಲದ ಆಡಳಿತ ಮಂಡಳಿ ಹಾಗೂ ವ್ಯವಸ್ಥಾಪನಾ ಸಮಿತಿ ಪ್ರಕಟಣೆ ಹೊರಡಿಸಿದೆ.
ಉತ್ಸವಗಳ ವಿವರ:ನವೆಂಬರ್ 21-11-2022 ಸೋಮವಾರ ಕೊಪ್ಪರಿಗೆ ಏರುವುದು, ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, 22-11-2022 ಮಂಗಳವಾರ ರಾತ್ರಿ ಶೇಷವಾಹನಯುಕ್ತ ಬಂಡಿ ಉತ್ಸವ, 23-11-2022 ಬುಧವಾರ ಲಕ್ಷದೀಪೋತ್ಸವ, 24-11-2022 ಗುರುವಾರ ಶೇಷವಾಹನೋತ್ಸವ, 25-11-2022 ಶುಕ್ರವಾರ ಅಶ್ವವಾಹನೋತ್ಸವ, 26-11-2022 ಶನಿವಾರ ಮಯೂರ ವಾಹನೋತ್ಸವ, 27-11-2022 ಆದಿತ್ಯವಾರ ರಾತ್ರಿ ಹೂವಿನ ತೇರಿನ ಉತ್ಸವ, 28-11-2022 ಸೋಮವಾರ ರಾತ್ರಿ ಪಂಚಮಿ ರಥೋತ್ಸವ, ತೈಲಾಭ್ಯಂಜನ, 29-11-2022 ಮಂಗಳವಾರ ಪ್ರಾತಃ ಕಾಲ ಚಂಪಾಷಷ್ಠಿ ಮಹಾರಥೋತ್ಸವ, 30- 11-2022 ಬುಧವಾರ ಅವಧೃತೋತ್ಸವ, ನೌಕಾವಿಹಾರ 05-12-2022 ಸೋಮವಾರ ಕೊಪ್ಪರಿಗೆ ಇಳಿಯುವುದು, ರಾತ್ರಿ ನೀರುಬಂಡಿ ಉತ್ಸವ, ದೈವಗಳ ನಡಾವಳಿ ನಡೆಯಲಿದೆ.