ಕರ್ನಾಟಕ

karnataka

ETV Bharat / state

ಕುಕ್ಕೆ ಸುಬ್ರಮಣ್ಯ ಚಂಪಾಷಷ್ಠಿಗೆ ಮುಖ್ಯಮಂತ್ರಿ, ಮುಜುರಾಯಿ ಸಚಿವರಿಗೆ ಆಮಂತ್ರಣ ನೀಡಿದ ದೇಗುಲ ಆಡಳಿತ ಮಂಡಳಿ

ಪ್ರಸಿದ್ಧ ನಾಗಕ್ಷೇತ್ರ ಮಹಾತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಚಂಪಾಷಷ್ಟಿ ಮಹೋತ್ಸವಕ್ಕೆ ಕರ್ನಾಟಕ ಮುಖ್ಯಮಂತ್ರಿ ಮಾನ್ಯ ಬಸವರಾಜ ಬೊಮ್ಮಾಯಿ ಅವರನ್ನು ಹಾಗೂ ಮುಜುರಾಯಿ ಸಚಿವೆ ಶಶಿಕಲಾ ಜೊಲ್ಲೆ ಅವರನ್ನು ಆಮಂತ್ರಣ ನೀಡಿ ಆಹ್ವಾನಿಸಲಾಯಿತು.

Kukke Subramanya
ಮುಖ್ಯಮಂತ್ರಿ, ಮುಜುರಾಯಿ ಸಚಿವರಿಗೆ ಆಮಂತ್ರಣ ನೀಡಿದ ದೇಗುಲ ಆಡಳಿತ ಮಂಡಳಿ

By

Published : Nov 18, 2022, 5:40 PM IST

ಕುಕ್ಕೆ ಸುಬ್ರಮಣ್ಯ (ದಕ್ಷಿಣ ಕನ್ನಡ):ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯದ ಚಂಪಾಷಷ್ಟಿ ಮಹೋತ್ಸವ ಹಿನ್ನೆಲೆ ಗುರುವಾರ ಮುಖ್ಯಮಂತ್ರಿ ಹಾಗೂ ಮುಜುರಾಯಿ ಸಚಿವೆ ಅವರನ್ನು ಬೆಂಗಳೂರಿನಲ್ಲಿ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ ಅವರ ನೇತೃತ್ವದಲ್ಲಿ ಭೇಟಿ ಮಾಡಿದ ದೇವಸ್ಥಾನದ ಆಡಳಿತ ಮಂಡಳಿ ಪದಾಧಿಕಾರಿಗಳು ಕಾರ್ಯಕ್ರಮಕ್ಕೆ ಆಹ್ವಾನಿಸಿದರು. ಇದೇ ನವೆಂಬರ್ 21ರಿಂದ ಕುಕ್ಕೆ ಸುಬ್ರಹ್ಮಣ್ಯದ ಚಂಪಾಷಷ್ಠಿ ಜಾತ್ರಾ ಮಹೋತ್ಸವ ನಡೆಯಲಿದೆ.

ಸುಪ್ರೀಂ ಕೋರ್ಟ್ ‌ತಡೆಯಾಜ್ಞೆ ಇರುವ ಕಾರಣ ಮಡೆಸ್ನಾನಕ್ಕೆ ಬ್ರೇಕ್ ಬಿದ್ದಿದ್ದು, ಕೆಲ ವರ್ಷಗಳಿಂದ ಕುಕ್ಕೆಯಲ್ಲಿ ಎಡೆಸ್ನಾನಕ್ಕಷ್ಟೇ ಅವಕಾಶ ದೇವಾಲಯದ ಅಂಗಳದ ಸುತ್ತಲೂ ಬಾಳೆ ಎಲೆಗಳನ್ನ ಹಾಕಿ ಅದರಲ್ಲಿ ನೈವೇದ್ಯ ಬಡಿಸಿ ನಂತರದಲ್ಲಿ ಅದ‌ನ್ನ ಗೋವುಗಳು ತಿಂದ ಬಳಿಕ ಭಕ್ತರು ಎಲೆಯ ಮೇಲೆ ಉರುಳೋದು ಎಡೆಸ್ನಾನ.

ಧಾರ್ಮಿಕ ದತ್ತಿ ಇಲಾಖೆಯ ಇಬ್ಬರು ಆಗಮಶಾಸ್ತ್ರ ಪಂಡಿತರ ಉಪಸ್ಥಿತಿಯಲ್ಲಿ ಈ ಎಡೆಸ್ನಾನ ನಡೆಯುತ್ತದೆ. ಚಂಪಾಷಷ್ಠಿಯ ಸಮಯದಲ್ಲಿ ಈ ವರ್ಷ ಹೆಚ್ಚಿನ ಜನರು ಸೇರಬಹುದು ಎಂದು ಅಂದಾಜಿಸಲಾಗಿದ್ದು ಎಲ್ಲಾ ಸಿದ್ಧತೆಗಳು ಪೂರ್ಣಗೊಳ್ಳುತ್ತಿವೆ.

ದೇವಾಲಯದ ಕಾರ್ಯನಿರ್ವಹಣಾಧಿಕಾರಿ ಡಾ.ನಿಂಗಯ್ಯ, ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸದಸ್ಯರಾದ ಪ್ರಸನ್ನ ದರ್ಬೆ, ಮನೋಹರ ರೈ, ಮಾಸ್ಟರ್‌ ಪ್ಲಾನ್ ಸದಸ್ಯರಾದ ಕಿಶೋರ್ ಕುಮಾರ್ ಕೂಜುಗೋಡು, ಚಂದ್ರಶೇಖರ ನಲ್ಲೂರಾಯ, ಮನೋಜ್ ಸುಬ್ರಹ್ಮಣ್ಯ, ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ:ಕನ್ನಡ ಶಾಲಾ ಮಕ್ಕಳ ಹಬ್ಬ ಹೆಸರಿನಲ್ಲಿ ಬಿಜೆಪಿಯಿಂದ ಅಧಿಕಾರ ದುರುಪಯೋಗ: ರಮಾನಾಥ ರೈ

ABOUT THE AUTHOR

...view details