ಕರ್ನಾಟಕ

karnataka

ETV Bharat / state

ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯ ₹123 ಕೋಟಿಗೆ ಏರಿಕೆ - ಈಟಿವಿ ಭಾರತ ಕನ್ನಡ

2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಾಲಯವು 123 ಕೋಟಿ ರೂ ಆದಾಯ ಗಳಿಸುವ ಮೂಲಕ ದಾಖಲೆ ಬರೆದಿದೆ.

kukke-subrahmanya-temples-income-increased-to-123-crore
ಕುಕ್ಕೆ ಸುಬ್ರಹ್ಮಣ್ಯ ದೇವಾಲಯದ ಆದಾಯ ₹123 ಕೋಟಿಗೆ ಏರಿಕೆ

By

Published : Apr 17, 2023, 6:02 PM IST

ಸುಬ್ರಹ್ಮಣ್ಯ (ದಕ್ಷಿಣ ಕನ್ನಡ) :ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ಹೊಂದಿರುವ ಮುಜರಾಯಿ ದೇವಾಲಯಗಳ ಪಟ್ಟಿಯಲ್ಲಿ ಬರುವ ಪ್ರಸಿದ್ಧ ನಾಗಾರಾಧನೆಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಕಳೆದೆರಡು ವರ್ಷಗಳಲ್ಲಿ ವಿವಿಧ ಕಾರಣಗಳಿಂದ ಕಡಿಮೆ ಆದಾಯ ಬಂದಿತ್ತು. ಆದರೆ ಪ್ರಸಕ್ತ 2022-23ನೇ ಸಾಲಿನ ಆರ್ಥಿಕ ವರ್ಷದಲ್ಲಿ 123 ಕೋಟಿ ರೂ. ಆದಾಯ ಗಳಿಸುವ ಮೂಲಕ ಮತ್ತೆ ದಾಖಲೆ ಬರೆದಿದೆ. 2022 ಏಪ್ರಿಲ್‌ನಿಂದ 2023 ಮಾರ್ಚ್ 31ರ ತನಕದ ಆರ್ಥಿಕ ವರ್ಷದಲ್ಲಿ ಒಟ್ಟು ₹123,64,49,480.47 ರೂಪಾಯಿ ಆದಾಯ ಗಳಿಸಿರುವ ಕುಕ್ಕೆ ಕ್ಷೇತ್ರ ಈ ಬಾರಿಯೂ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆಯುವ ನಿರೀಕ್ಷೆ ಇದೆ.

ದೇವಸ್ಥಾನಕ್ಕೆ ಮುಖ್ಯವಾಗಿ ಹರಕೆಯ ಸೇವೆಗಳು, ಕಾಣಿಕೆ ಡಬ್ಬಿ, ಬಡ್ಡಿ ದರಗಳು, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತಿದೆ. ಎರಡು ವರ್ಷಗಳಲ್ಲಿ ಕೊರೊನಾ ಹಿನ್ನೆಲೆಯಲ್ಲಿ ಭಕ್ತರ ಪ್ರವೇಶಕ್ಕೆ ನಿರ್ಬಂಧವಿದ್ದ ಕಾರಣ 2019ರಿಂದ 22ರವರೆಗೆ ದೇವಸ್ಥಾನದ ಆದಾಯ ಇಳಿಮುಖವಾಗಿತ್ತು. 2019- 20ರಲ್ಲಿ ₹98,92,24,193.34 ರೂಪಾಯಿ ಮತ್ತು 2021-22ನೇ ಸಾಲಿನಲ್ಲಿ ₹72,73,23,758.07 ರೂ. ಆದಾಯ ಗಳಿಸಿತ್ತು.

2006-07ರಲ್ಲಿ ದೇವಳದ ಆದಾಯ ₹19.76 ಕೋಟಿ ದಾಖಲಾಗಿತ್ತು. ನಂತರದಲ್ಲಿ 2007-08ರಲ್ಲಿ ₹24.44 ಕೋಟಿ ರೂ.ಗಳಿಗೆ ಏರಿಕೆ ಕಂಡು ರಾಜ್ಯದ ಶ್ರೀಮಂತ ದೇವಸ್ಥಾನವಾಗಿ ಕುಕ್ಕೆ ಸುಬ್ರಹ್ಮಣ್ಯ ದೇಗುಲ ಗುರುತಿಸಿಕೊಂಡಿತ್ತು. ನಂತರದ ವರ್ಷಗಳಲ್ಲಿ ಇದು ಮುಂದುವರೆದು ರಾಜ್ಯದಲ್ಲೇ ಅಗ್ರಮಾನ್ಯ ದೇವಸ್ಥಾನವೆಂಬ ಖ್ಯಾತಿಗೂ ಕುಕ್ಕೆ ಸುಬ್ರಹ್ಮಣ್ಯ ಪಾತ್ರವಾಯಿತು.

ಇದನ್ನೂ ಓದಿ :ಮಾದಪ್ಪನ ಬೆಟ್ಟದಲ್ಲಿ ಭಕ್ತ ಸಾಗರ, ಎರಡು ದಿನಗಳಲ್ಲಿ 20 ಲಕ್ಷ ರೂ. ಆದಾಯ!

ABOUT THE AUTHOR

...view details