ಮಂಗಳೂರು:ಕುದುರೆಮುಖ ಕಬ್ಬಿಣದ ಅದಿರು ಕಂಪನಿ (ಕೆಐಒಸಿಎಲ್)ಗೆ ದೇವದಾರಿ ಕಬ್ಬಿಣದ ಅದಿರು ಪ್ರದೇಶದಲ್ಲಿ ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ ಅದಿರಿನ ಗಣಿಗಾರಿಕೆ ನಡೆಸಲು ಕರ್ನಾಟಕ ಸರ್ಕಾರ ಗಣಿ ಮತ್ತು ಭೂವಿಜ್ಞಾನ ಇಲಾಖೆಯಿಂದ ಅನುಮತಿ ದೊರೆತಿದೆ ಎಂದು ಕೆಐಒಸಿಎಲ್ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ಟಿ.ಸಾಮಿನಾಥನ್ ತಿಳಿಸಿದ್ದಾರೆ. ಮಂಗಳೂರಿನಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, 388 ಹೆಕ್ಟೇರ್ ಪ್ರದೇಶದಲ್ಲಿ 50 ವರ್ಷಗಳ ಅವಧಿಗೆ, ಕರ್ನಾಟಕದ ಸರ್ಕಾರದ ಗಣಿ ಮತ್ತು ಭೂವಿಜ್ಞಾನದ ನಿರ್ದೇಶಕರೊಂದಿಗೆ 2023 ಜನವರಿ 2 ರಂದು ಗಣಿಗಾರಿಕೆ ಗುತ್ತಿಗೆಗೆ ಒಡಂಬಡಿಕೆ ಮಾಡಿಕೊಳ್ಳಲಾಗಿದೆ. ಕೆಐಓಸಿಎಲ್ ಕಂಪನಿಯು ಜ.18, 2023 ರಂದು ಸಂಡೂರು ತಾಲೂಕು, ಬಳ್ಳಾರಿ ಜಿಲ್ಲೆ, ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ರೂ 3,29,17 ಸ್ಟ್ಯಾಂಪ್ ಡ್ಯೂಟಿ ಮತ್ತು ನೋಂದಣಿ ಶುಲ್ಕ ಜಮಾಯಿಸಿ, ದೇವದಾರಿ ಕಬ್ಬಿಣದ ಅದಿರು ಗಣಿಗಾರಿಕೆ ಗುತ್ತಿಗೆ ನೋಂದಾಯಿಸಿದೆ ಎಂದು ಹೇಳಿದರು.
ದೇವದಾರಿ ಗಣಿ ಕಬ್ಬಿಣದ ಅದಿರು ಮತ್ತು ಮ್ಯಾಂಗನೀಸ್ ಅದಿರು ಗಣಿಗಾರಿಕೆ ಯೋಜನೆಗೆ 470 ಹೆಕ್ಟೇರ್ ಪ್ರದೇಶದಲ್ಲಿ 388 ಹೆಕ್ಟೇರ್ ಅರಣ್ಯಭೂಮಿಯನ್ನು ತೆರವುಗೊಳಿಸಲು ಅಂತಿಮ ಹಂತ-IIರ ಅರಣ್ಯ ತೆರವು ಅನುಮೋದನೆ ನೀಡಿದೆ ಎಂದು ಟಿ.ಸಾಮಿನಾಥನ್ ತಿಳಿಸಿದರು. ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ, 13.5761 ಹೆಕ್ಟೇರ್ ಜೊತೆಗೆ ಕನ್ವೇಯರ್ ಕಾರಿಡಾರ್, ಅಪ್ರೋಚ್ ರೋಡ್, ಪವರ್ ಟ್ರಾನ್ಸ್‌ಮಿಷನ್ ಲೈನ್/ವಾಟರ್ ಲೈನ್, ಒಟ್ಟು 401.5761 ಹೆಕ್ಟೇರ್ ನೀಡಿದೆ. 2022-23 ರ ಹಣಕಾಸು ವರ್ಷದಲ್ಲಿ ಕಂಪನಿಯ ಕಾರ್ಯಕ್ಷಮತೆಯು ಕಬ್ಬಿಣದ ಉಂಡೆಗಳ ಮೇಲೆ (22.05.2022 ) ಭಾರತದ ಸರ್ಕಾರ 45% ರಫ್ತು ಸುಂಕವನ್ನು ವಿಧಿಸುವುದರೊಂದಿಗೆ ಕಂಪನಿಯ ಉತ್ಪಾದನಾ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು, ಇದು ಕಂಪನಿಯ ಆರ್ಥಿಕ ಲಾಭದ ಮೇಲೆ ಪರಿಣಾಮ ಬೀರಿತ್ತು.
ಭಾರತದ ಸರ್ಕಾರವು 19.11.2022ರಿಂದ ಕಬ್ಬಿಣದ ಅದಿರು ಉಂಡೆಗಳ ಮೇಲಿನ 45% ರಫ್ತು ಸುಂಕವನ್ನು ಹಿಂಪಡೆಯುವುದರೊಂದಿಗೆ ಕಂಪನಿಯ ಬೆಳವಣಿಗೆ ಮತ್ತು ಪ್ರಗತಿಯಲ್ಲಿ ಗಣನೀಯವಾಗಿ ಸಹಾಯ ಮಾಡಿತು. ಕಂಪನಿಯು ರಫ್ತು ಆಧಾರಿತ ಘಟಕವಾಗಿರುವುದರಿಂದ ಇದು ಕಂಪನಿಯ ಮೇಲೆ ಹೆಚ್ಚು ಪರಿಣಾಮ ಬೀರಿತು ಮತ್ತು ಕಂಪನಿಯ ಉತ್ಪಾದನಾ ಚಟುವಟಿಕೆಗಳನ್ನು ಕಾರ್ಯಸಾಧ್ಯವಲ್ಲದ ದೃಷ್ಟಿಯಿಂದ ತಾತ್ಕಾಲಿಕವಾಗಿ ನಿಲ್ಲಿಸಬೇಕಾಯಿತು. ಸಪ್ಟೆಂಬರ್30, 2022 ಕ್ಕೆ ಕೊನೆಗೊಂಡ ಅರ್ಧ ವರ್ಷದಲ್ಲಿ ಕಂಪನಿಯು ರೂ. 146 ಕೋಟಿಯ ನಷ್ಟ ಅನುಭವಿಸಿದೆ. ರಫ್ತು ಸುಂಕವನ್ನು ತೆಗೆದುಹಾಕಿದ ನಂತರ, ಕಂಪನಿಯು ಸವಾಲುಗಳನ್ನು ಜಯಿಸಲು ಶ್ರಮಿಸುತ್ತಿದೆ ಎಂದರು.