ಕರ್ನಾಟಕ

karnataka

ETV Bharat / state

ಕೆಎಸ್ಆರ್​ಟಿಸಿ ಬಸ್ ಚಾಲಕನ ಕೊಲೆ ಯತ್ನ: ಓರ್ವ ವಶಕ್ಕೆ - KSR TC bus driver's was try to murder by a man

ಪುತ್ತೂರು ಡಿಪೋದ ಕೆಎಸ್ಆರ್​​​​ಟಿಸಿ ಬಸ್ ಚಾಲಕ ರಾಜು ಗಜಕೋಶ ಅವರು ಎಂದಿನಂತೆ ಇಂದು ಬೆಳಗ್ಗೆ ಪುತ್ತೂರಿನಿಂದ ಮಂಗಳೂರು ಕಡೆಗೆ ಬಸ್​ ಚಲಾಯಿಸಿಕೊಂಡು ಬರುತ್ತಿದ್ದರು. ಈ ವೇಳೆ ಡಿಯೋ ಸ್ಕೂಟರ್ ಸವಾರನೋರ್ವ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿಕೊಂಡು ಬಂದಿದ್ದು, ಬಳಿಕ ವೇಗವಾಗಿ ಬಸ್ ಚಲಾಯಿಸುತ್ತೀಯಾ? ಎಂದು ನಿಂದಿಸಿದ್ದಾನೆ. ಬಳಿಕ ಸ್ಕೂಟರ್​ನಿಂದ ಚಾಕು ತಂದು ಚಾಲಕ ರಾಜು ಗಜಕೋಶ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದ.

ಚಾಕು ಸಹಿತ ಓರ್ವ ವಶಕ್ಕೆ
ಚಾಕು ಸಹಿತ ಓರ್ವ ವಶಕ್ಕೆ

By

Published : Mar 5, 2021, 5:19 PM IST

ಮಂಗಳೂರು: ನಗರದ ಪಡೀಲ್ ಕಣ್ಣೂರು ರೈಲ್ವೆ ಬ್ರಿಡ್ಜ್ ಬಳಿ ಕೆಎಸ್ಆರ್​​ಟಿಸಿ ಬಸ್ ಚಾಲಕನನ್ನು ಕ್ಷುಲ್ಲಕ ಕಾರಣಕ್ಕೆ ನಿಂದಿಸಿ ಚಾಕುವಿನಿಂದ ಕೊಲೆ ಮಾಡಲು ಯತ್ನಿಸಿದ ಆರೋಪದ ಮೇಲೆ ಓರ್ವನನ್ನು ಪೊಲೀಸರು ಬಂಧಿಸಿದ್ದಾರೆ.

ಅಡ್ಯಾರ್ ಕಣ್ಣೂರು, ಕುಂಡಾಲ ನಿವಾಸಿ ಸೊಹೀಫ್ (19) ಬಂಧಿತ ಆರೋಪಿ.

ಪುತ್ತೂರು ಡಿಪೋದ ಕೆಎಸ್ಆರ್​​​​ಟಿಸಿ ಬಸ್ ಚಾಲಕ ರಾಜು ಗಜಕೋಶ

ಪ್ರಕರಣದ ಹಿನ್ನೆಲೆ: ಪುತ್ತೂರು ಡಿಪೋದ ಕೆಎಸ್ಆರ್​​​​ಟಿಸಿ ಬಸ್ ಚಾಲಕ ರಾಜು ಗಜಕೋಶ ಅವರು ಎಂದಿನಂತೆ ಇಂದು ಬೆಳಗ್ಗೆ ಪುತ್ತೂರಿನಿಂದ ಮಂಗಳೂರು ಕಡೆಗೆ ಬಸ್​ ಚಲಾಯಿಸಿಕೊಂಡು ಬರುತ್ತಿದ್ದರು. ಬಸ್ ಪಡೀಲ್ ಕಣ್ಣೂರು ತಲುಪುತ್ತಿದ್ದ ಸಂದರ್ಭ ಬೆಳಗ್ಗೆ 8.50ರ ಸುಮಾರಿಗೆ ಡಿಯೋ ಸ್ಕೂಟರ್ ಸವಾರನೋರ್ವ ಅಡ್ಡಾದಿಡ್ಡಿಯಾಗಿ ವಾಹನ ಚಲಾಯಿಸಿಕೊಂಡು ಬರುತ್ತಿದ್ದ.

ಪಡೀಲ್ ರೈಲ್ವೆ ಓವರ್ ಬ್ರಿಡ್ಜ್ ಬಳಿ ತಲುಪಿದಾಗ ಕೆಎಸ್ಆರ್​​ಟಿಸಿ ಬಸ್ಸಿಗೆ ಡಿಯೋ ಸ್ಕೂಟರ್​ನನ್ನು ಅಡ್ಡಲಾಗಿಟ್ಟು ಸ್ಕೂಟರ್​​ನಿಂದ ಇಳಿದು, ಆರೋಪಿ‌ ಸೊಹಿಫ್ ಬಸ್​ನ ಡೋರ್ ಎಳೆದು ಭಾರಿ ವೇಗವಾಗಿ ಬಸ್ ಚಲಾಯಿಸುತ್ತೀಯಾ ಎಂದು ನಿಂದಿಸಿದ್ದಾನೆ. ಬಳಿಕ ಸ್ಕೂಟರ್​ನಿಂದ ಚಾಕು ತಂದು ಚಾಲಕ ರಾಜು ಗಜಕೋಶ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾನೆ. ತಕ್ಷಣ ಅವರು ಹಿಂದಕ್ಕೆ ಸರಿದು ತಪ್ಪಿಸಿಕೊಂಡಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಇದನ್ನೂ ಓದಿ: ಮಟ್ಕಾ ದಂಧೆ ಅಡ್ಡೆಗಳ ಮೇಲೆ ಸಿಸಿಬಿ ದಾಳಿ, ಐವರ ಬಂಧನ

ಈ ಬಗ್ಗೆ ಬಸ್ ಚಾಲಕ ರಾಜು ಗಜಕೋಶರವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಿ, ಕಂಕನಾಡಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ABOUT THE AUTHOR

...view details