ಕರ್ನಾಟಕ

karnataka

ETV Bharat / state

ಪುತ್ತೂರು ಸೆಂಟ್ರಲ್ ಮಾರ್ಕೆಟ್‌ಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್‌ ಭೇಟಿ - ದಕ್ಷಿಣಕನ್ನಡ ಸುದ್ದಿ

ಪುತ್ತೂರಿನ ಸೆಂಟ್ರಲ್ ಮಾರ್ಕೆಟ್ ಮಳಿಗೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್​ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತಕರಾದ ನಾರಾಯಣಸ್ವಾಮಿ ಭೇಟಿ ನೀಡಿದರು.

KPCC  Vice President Salim Ahmed Visiting Central Market Shop in Puttur
ಪುತ್ತೂರು ಸೆಂಟ್ರಲ್ ಮಾರ್ಕೆಟ್ ಮಳಿಗೆಗೆ ಭೇಟಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ

By

Published : Sep 12, 2020, 9:27 PM IST

ಪುತ್ತೂರು(ದಕ್ಷಿಣಕನ್ನಡ): ಪುತ್ತೂರಿನ ಸೆಂಟ್ರಲ್ ಮಾರ್ಕೆಟ್ ಮಳಿಗೆಗೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮ್ಮದ್​ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ಮುಖ್ಯ ಸಚೇತರಾದ ಶ್ರೀ ನಾರಾಯಣ ಸ್ವಾಮಿ ಭೇಟಿ ನೀಡಿದರು.

ಪುತ್ತೂರು ಸೆಂಟ್ರಲ್ ಮಾರ್ಕೆಟ್ ಮಳಿಗೆಗೆ ಭೇಟಿ ನೀಡಿದ ಕೆಪಿಸಿಸಿ ಕಾರ್ಯಾಧ್ಯಕ್ಷ

ಈ ವೇಳೆ ಮಾತನಾಡಿದ ಸಲೀಂ ಅಹಮ್ಮದ್, ತಮ್ಮ ವ್ಯವಹಾರದ ಜೊತೆಗೆ ಸಮಾಜ ಸೇವೆ ಮಾಡುತ್ತಿರುವ ಯುವಕರ ಕಾರ್ಯ ವೈಖರಿಗೆ ಮೆಚ್ಚುಗೆ ವ್ಯಕ್ತಪಡಿಸಿ ಶುಭ ಹಾರೈಸಿದರು. ಕೊರೊನಾ ಸಂದರ್ಭದಲ್ಲಿ ಬಡಜನರಿಗೆ, ಕೊರೊನಾ ವಾರಿಯರ್ಸ್​ಗೆ ಉಚಿತವಾಗಿ ತರಕಾರಿ, ಹಣ್ಣು-ಹಂಪಲುಗಳನ್ನು ನೀಡುತ್ತಿರುವ ನಿಮ್ಮ ಸೇವೆ ಮುಂದೆ ಸಾಗಲಿ. ಇಂತಹ ಸಮಾಜಮುಖಿ ಕಾರ್ಯಗಳಿಗೆ ನಮ್ಮ ಬೆಂಬಲ ಯಾವಾಗಲೂ ಇರುತ್ತದೆ ಎಂದರು.

ಈ ವೇಳೆ ಪುತ್ತೂರು ನಗರಸಭೆಯ ಜನ ಕೊರೊನಾ ವಾರಿಯರ್ಸ್​ ಅನ್ನು ಸನ್ಮಾನಿಸಿ, ನಗರಸಭೆಗೆ ಸೆಂಟ್ರಲ್ ಮಾರ್ಕೆಟ್ ವತಿಯಿಂದ ಸ್ಯಾನಿಟೈಸರ್ ವಿತರಣೆ ಮಾಡಲಾಯಿತು.

ABOUT THE AUTHOR

...view details