ಕರ್ನಾಟಕ

karnataka

ETV Bharat / state

ಮಾ.3 ರಿಂದ ಬೆಲೆ ಏರಿಕೆ ವಿರುದ್ಧ ಹೋರಾಟ ಆರಂಭ: ಡಿಕೆಶಿ - ಹಿಂದೆ ಕಾಂಗ್ರೆಸ್ ಸರ್ಕಾರ

ಕೇಂದ್ರ ಸರ್ಕಾರ ಪ್ರತಿದಿನ ಒಂದೊಂದು ದರ ತರುತ್ತಿದೆ. ಒಂದು ತಿಂಗಳಲ್ಲಿ ಹತ್ತು ಬಾರಿ ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ ಎಂದು ಡಿ.ಕೆ. ಶಿವಕುಮಾರ ಹೇಳಿದರು.

KPCC President D.K. Shivakumar talk
ಡಿಕೆಶಿ ಗುಡುಗು

By

Published : Feb 27, 2021, 3:46 PM IST

ಮಂಗಳೂರು: ಪೆಟ್ರೋಲ್-ಡೀಸೆಲ್ ಬೆಲೆ ಏರಿಕೆ ವಿರುದ್ದ ಮಾರ್ಚ್ 3 ರಿಂದ ಹೋರಾಟ ಆರಂಭವಾಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಡಿಕೆಶಿ ಗುಡುಗು

ಓದಿ: ಪರಿಷತ್ ಸಚಿವಾಲಯದ ಸಿಬ್ಬಂದಿಗೆ ಡ್ರೆಸ್ ಕೋಡ್ ಕಡ್ಡಾಯ : ಮಾರ್ಚ್ 15ರಿಂದ ಜಾರಿ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಪ್ರತಿದಿನ ಒಂದೊಂದು ದರ ತರುತ್ತಿದೆ. ಒಂದು ತಿಂಗಳಲ್ಲಿ ಹತ್ತು ಬಾರಿ ಪೆಟ್ರೋಲ್ ಬೆಲೆ ಜಾಸ್ತಿಯಾಗಿದೆ ಎಂದರು.

ಈಗ ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿರುವವರು, ಹಿಂದೆ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಏನು ಮಾತಾಡಿದ್ದಾರೆ ಎಂಬುದನ್ನು ಮಾಧ್ಯಮಗಳು ಜನರ ಮುಂದೆ ಇಡಲಿ ಎಂದರು. 20 ಲಕ್ಷ ಕೋಟಿ ರೂ. ಅನುದಾನದ ಪಟ್ಟಿ ನೀಡಿ ಎಂದರೂ ನೀಡುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ABOUT THE AUTHOR

...view details