ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ 3 ಮಂದಿ ಸಾವು, 374 ಮಂದಿ ಪಾಸಿಟಿವ್ - ಕೊರೊನಾ ಸೋಂಕು
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು ಹೊಸದಾಗಿ 374 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಹಾಗೂ ಮೂರು ಜನ ಕೊರೊನಾಗೆ ಬಲಿಯಾಗಿದ್ದಾರೆ.
ಮಂಗಳೂರು;ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಇಂದು ಮೂರು ಮಂದಿ ಸಾವನ್ನಪ್ಪಿದ್ದು 374 ಮಂದಿಗೆ ಸೋಂಕು ದೃಢಪಟ್ಟಿದೆ.
ಜಿಲ್ಲೆಯಲ್ಲಿ ಕೊರೊನಾದಿಂದ ಮೃತಪಟ್ಟ 3 ಮಂದಿಯಲ್ಲಿ ಒಬ್ಬರು ಪುತ್ತೂರು ತಾಲೂಕು ಮತ್ತು ಇಬ್ಬರು ಹೊರಜಿಲ್ಲೆಯವರಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 412 ಕ್ಕೆ ಏರಿಕೆಯಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಇಂದು 374 ಮಂದಿಗೆ ಪಾಸಿಟಿವ್ ದೃಢಪಟ್ಟಿದ್ದು, ಇದರಲ್ಲಿ 219 ಮಂದಿ ಮಂಗಳೂರು ತಾಲೂಕು, 61 ಮಂದಿ ಬಂಟ್ವಾಳ ತಾಲೂಕು,36 ಮಂದಿ ಪುತ್ತೂರು ತಾಲೂಕು, 6 ಮಂದಿ ಸುಳ್ಯ ತಾಲೂಕು, 32 ಮಂದಿ ಬೆಳ್ತಂಗಡಿ ತಾಲೂಕು ಮತ್ತು 20 ಮಂದಿ ಹೊರಜಿಲ್ಲೆಯವರಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ 15452 ಮಂದಿಗೆ ಕೊರೊನಾ ದೃಢಪಟ್ಟಿದೆ.
ಜಿಲ್ಲೆಯಲ್ಲಿ ಇಂದು 232 ಮಂದಿ ಗುಣಮುಖರಾಗಿದ್ದು ಈವರೆಗೆ 11986 ಮಂದಿ ಗುಣಮುಖರಾಗಿದ್ದಾರೆ. 3054 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.