ಕರ್ನಾಟಕ

karnataka

ETV Bharat / state

ಕುಕ್ಕೆಯ ಆನ್​ಲೈನ್​ ಸೇವೆ ನಿರ್ವಹಣೆಯಿಂದ ಪ್ಯೂರ್ ಪ್ರೇಯರ್ ಸಂಸ್ಥೆಯನ್ನ ಕೈಬಿಡಲಾಗಿದೆ​​: ಕೋಟಾ ಶ್ರೀನಿವಾಸ್ ಪೂಜಾರಿ

ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸೇವೆಗಳ ವಿಚಾರದಲ್ಲಿ ಪ್ಯೂರ್ ಪ್ರೇಯರ್ ಸಂಸ್ಥೆ ಅವ್ಯವಹಾರ ನಡೆಸಿದೆ ಎನ್ನುವ ವಿಚಾರ ಸರ್ಕಾರದ ಗಮನಕ್ಕೆ ಬಂದ ತಕ್ಷಣವೇ ಪ್ಯೂರ್ ಪ್ರೇಯರ್ ಸಂಸ್ಥೆಯನ್ನು ಕೈಬಿಡಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

Kukke subramanya temple
Kukke subramanya temple

By

Published : Jun 20, 2020, 10:34 PM IST

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯದ ಆನ್​ಲೈನ್ ಸೇವೆಗಳ ನಿರ್ವಹಣೆಯಿಂದ ಪ್ಯೂರ್ ಪ್ರೇಯರ್ ಸಂಸ್ಥೆಯನ್ನು ಕೈಬಿಡಲಾಗಿದೆ ಎಂದು ಮುಜರಾಯಿ ಇಲಾಖೆ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ತಿಳಿಸಿದರು.

ಈ ಕುರಿತು ಮಾತನಾಡಿದ ಅವರು, ತಾನು ಮುಜರಾಯಿ ಸಚಿವನಾಗಿ ಆಯ್ಕೆಯಾಗುವ ಮೊದಲೇ ರಾಜ್ಯದ 54 ದೇವಸ್ಥಾನಗಳ ಸೇವೆಯನ್ನು ಆನ್​ಲೈನ್ ಮೂಲಕ ನಡೆಸಲು ಸರ್ಕಾರ ತೀರ್ಮಾನಿಸಿತ್ತು. ಇದಕ್ಕಾಗಿ ಸರ್ವೇ ಕೂಡಾ ನಡೆಸಲಾಗಿದ್ದು, ಪ್ಯೂರ್ ಪ್ರೇಯರ್ ಸಂಸ್ಥೆಗೆ 15 ಜಿಲ್ಲೆಗಳ ದೇವಸ್ಥಾನಗಳನ್ನು ಬಿಟ್ಟುಕೊಡಲಾಗಿತ್ತು. ಉಳಿದ ಜಿಲ್ಲೆಗಳ ಸರ್ವೇ ಕಾರ್ಯವನ್ನು ಇನ್ನಷ್ಟೇ ಮಾಡಬೇಕಿದೆ.

ಈ ನಡುವೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದ ಸೇವೆಗಳ ವಿಚಾರದಲ್ಲಿ ಪ್ಯೂರ್ ಪ್ರೇಯರ್ ಸಂಸ್ಥೆ ಅವ್ಯವಹಾರ ನಡೆಸಿದೆ ಎನ್ನುವ ವಿಚಾರ ಸರ್ಕಾರದ ಗಮನಕ್ಕೆ ಬಂದ ತಕ್ಷಣವೇ ಸಂಸ್ಥೆಯನ್ನು ಕೈಬಿಡಲಾಗಿದೆ. ಈ ಸಂಸ್ಥೆಯು ಎಲ್ಲಾ ದೇವಸ್ಥಾನಗಳ ಆನ್​ಲೈನ್ ಸೇವೆಯನ್ನು ಉಚಿತವಾಗಿ ನಿರ್ವಹಿಸುತ್ತಿದ್ದು, ಸರ್ಕಾರ ಯಾವುದೇ ವೆಚ್ಚವನ್ನು ಸಂಸ್ಥೆಗೆ ನೀಡುತ್ತಿಲ್ಲ ಎಂದು ಇದೇ ವೇಳೆ ಸ್ಪಷ್ಟಪಡಿಸಿದರು.

ಅಲ್ಲದೆ ಮುಜರಾಯಿ ಇಲಾಖೆ ತನ್ನದೇ ಆದ ಹೊಸ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುತ್ತಿದ್ದು, ಈ ಕಾರ್ಯ ಮುಂದಿನ ಎರಡು ತಿಂಗಳಲ್ಲಿ ಮುಗಿಯಲಿದೆ. ಆ ಬಳಿಕ ಇಲಾಖೆಯೇ ಎಲ್ಲಾ ದೇವಾಲಯಗಳ ಆನ್​ಲೈನ್ ಸೇವೆಗಳನ್ನು ನಿರ್ವಹಿಸಲಿದೆ ಎಂದು ತಿಳಿಸಿದರು.

ABOUT THE AUTHOR

...view details