ಮಂಗಳೂರು:ಕಡೆಗಳಲ್ಲಿ ಕೊರಗಜ್ಜನ ಗುಡಿಯನ್ನು ಅಪವಿತ್ರ ಮಾಡಲಾಗಿದೆ ಎಂಬ ಪ್ರಕರಣದಲ್ಲಿ ಪೊಲೀಸ್ ವಶದಲ್ಲಿದ್ದ ಶಂಕಿತರಿಬ್ಬರನ್ನು ಸಾಕ್ಷ್ಯಾಧಾರದ ಕೊರತೆಯಿಂದ ಬಂಧನ ಮಾಡಲಾಗಿಲ್ಲ ಎಂದು ಮಂಗಳೂರು ಉಪ ಪೊಲೀಸ್ ಆಯುಕ್ತ ಹರಿರಾಂ ಶಂಕರ್ ತಿಳಿಸಿದ್ದಾರೆ.
ಕೊರಗಜ್ಜ ಗುಡಿ ಅಪವಿತ್ರ: ಸಾಕ್ಷ್ಯಾಧಾರದ ಕೊರತೆಗೆ ಶಂಕಿತರನ್ನು ಬಂಧಿಸದ ಪೊಲೀಸರು - ಕೊರಗಜ್ಜ ಗುಡಿ
ಶಂಕಿತರಿಬ್ಬರು ಕೊರಗಜ್ಜನ ಗುಡಿಯನ್ನು ಅಪವಿತ್ರ ಪ್ರಕರಣದ ತನಿಖೆ ನಡೆಸಿದ ಸಂದರ್ಭ ಈ ಕೃತ್ಯದಲ್ಲಿ ತಾವಿಬ್ಬರು ಭಾಗಿಯಾಗಿರುವ ಬಗ್ಗೆ ಆರೋಪಿಗಳು ಯಾವುದೇ ಮಾಹಿತಿ ನೀಡಿಲ್ಲ. ಭಾಗಿಯಾಗಿರುವ ಬಗ್ಗೆಯೂ ಸರಿಯಾದ ಪುರಾವೆ ದೊರೆತಿಲ್ಲ. ಆದ್ದರಿಂದ ಸೆಕ್ಷನ್ 169ರ ಅನ್ವಯ ಆರೋಪಿಗಳಿಗೆ 24 ಗಂಟೆಗಳನ್ನು ಮೀರಿ ಬಂಧನದಲ್ಲಿ ಇಡಲಾಗುವುದಿಲ್ಲ ಎಂದು ಉಪ ಪೊಲೀಸ್ ಆಯುಕ್ತ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಶಂಕಿತರಿಬ್ಬರು ಕೊರಗಜ್ಜನ ಗುಡಿಯನ್ನು ಅಪವಿತ್ರ ಮಾಡಿರುವ ಕೃತ್ಯದಲ್ಲಿ ಭಾಗಿಯಾಗಿರುವ ಓರ್ವ ಮೃತಪಟ್ಟ ಬಗ್ಗೆ ತಿಳಿಸಿದ್ದಾರೆ. ಆದರೆ ತನಿಖೆ ನಡೆಸಿದ ಸಂದರ್ಭ ಈ ಕೃತ್ಯದಲ್ಲಿ ತಾವಿಬ್ಬರು ಭಾಗಿಯಾಗಿರುವ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ಕೃತ್ಯದಲ್ಲಿ ಅವರು ಭಾಗಿಯಾಗಿರುವ ಬಗ್ಗೆಯೂ ಸರಿಯಾದ ಪುರಾವೆ ದೊರೆತಿಲ್ಲ. ಆದ್ದರಿಂದ ಸೆಕ್ಷನ್ 169ರ ಅನ್ವಯ ಆರೋಪಿಗಳಿಗೆ 24 ಗಂಟೆಗಳನ್ನು ಮೀರಿ ಬಂಧನದಲ್ಲಿಡಲಾಗುವುದಿಲ್ಲ ಮತ್ತು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿಲ್ಲ. ಆದ್ದರಿಂದ ಅವರಿಬ್ಬರನ್ನು ಬಿಡುಗಡೆ ಮಾಡಲಾಗಿದೆ ಎಂದರು.
ಆದರೆ ಅವರು ಇನ್ನೂ ಆರೋಪ ಮುಕ್ತವಾಗಿಲ್ಲ. ಷರತ್ತುಗಳ ಅನ್ವಯ ಅವರನ್ನು ಬಂಧ ಮುಕ್ತಗೊಳಿಸಲಾಗಿದೆ. ಮುಂದೆ ಸರಿಯಾದ ಸಾಕ್ಷಿಪುರಾವೆಗಳನ್ನು ಸಂಗ್ರಹಿಸಿದ ನಂತರ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಡಿಸಿಪಿ ಹರಿರಾಂ ಶಂಕರ್ ತಿಳಿಸಿದ್ದಾರೆ.