ಕರ್ನಾಟಕ

karnataka

ETV Bharat / state

ಮಾನ್ಸೂನ್‌: ಕೊಂಕಣ ರೈಲ್ವೆಯಿಂದ ಅಗತ್ಯ ಪೂರ್ವ ತಯಾರಿ - ಕೊಂಕಣ ರೈಲ್ವೆ

ಕೋವಿಡ್-19 ಸೋಂಕಿನ ಈ ಪರಿಸ್ಥಿತಿಯಲ್ಲಿ ಕೊಂಕಣ ರೈಲ್ವೆ ದೇಶದ ಜನರ ಅಗತ್ಯತೆಗೆ ನಿರಂತರ ಸರಕು ಸೇವೆಗಳ ಮೂಲಕ ಅಗತ್ಯ ವಸ್ತುಗಳ ಲಭ್ಯವಾಗಲು ಎಲ್ಲಾ ಪ್ರಯತ್ನ ಮಾಡುತ್ತಿದೆ‌. ಈ ಕುರಿತು ಕೊಂಕಣ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್.ಕೆ.ವರ್ಮಾ ಪ್ರಕಟಣೆ ಹೊರಡಿಸಿದ್ದಾರೆ.

konkan railway
ಮಾನ್ಸೂನ್‌: ಕೊಂಕಣ ರೈಲ್ವೆಯಿಂದ ಅಗತ್ಯ ಪೂರ್ವ ತಯಾರಿ

By

Published : Jun 5, 2020, 11:00 PM IST

ಮಂಗಳೂರು: ಮಾನ್ಸೂನ್ ಸಂದರ್ಭದಲ್ಲಿ ಪ್ರಯಾಣಿಕರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಕೊಂಕಣ ರೈಲ್ವೆ ಇಲಾಖೆ ಅಗತ್ಯ ಕ್ರಮಗಳೊಂದಿಗೆ ಸಜ್ಜಾಗಿದೆ.

ರೈಲ್ವೆ ಸಿಬ್ಬಂದಿ ಈಗಾಗಲೇ ಟ್ರ್ಯಾಕ್‌ಗಳನ್ನು ನಿರ್ವಹಿಸಲು ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಈ ಸಂದರ್ಭ ಸುರಕ್ಷತೆ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆಗೆ ಸಂಬಂಧಿಸಿದ ಸರ್ಕಾರದ ಎಲ್ಲಾ ಮಾರ್ಗಸೂಚಿಗಳನ್ನು ಅನುಸರಿಸಲಾಗುತ್ತಿದೆ ಎಂದು ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಎಲ್.ಕೆ.ವರ್ಮಾ ಪ್ರಕಟಣೆಯಲ್ಲಿ ವಿವರ ನೀಡಿದ್ದಾರೆ.

ಕೊಂಕಣ ರೈಲ್ವೆ ಪ್ರದೇಶದಲ್ಲಿ ಮಳೆಗಾಲದಲ್ಲಿ ಭಾರಿ ಮಳೆಯಾಗುತ್ತಿದ್ದು, ಇಲಾಖೆ ಮಾನ್ಸೂನ್ ಋತುವಿಗೆ ಸಂಪೂರ್ಣ ಸಜ್ಜಾಗಿದೆ. ಈ ನಿಟ್ಟಿನಲ್ಲಿ ಕೋಲಾಡ್​ನಿಂದ ತೋಕೂರುವರೆಗೆ ಎಲ್ಲ ಸುರಕ್ಷತಾ ಕಾರ್ಯಗಳು ಸಂಪೂರ್ಣಗೊಂಡಿವೆ. ಇಲ್ಲಿ ನಡೆದಿರುವ ಭೂ ಸುರಕ್ಷತಾ ಕಾರ್ಯಗಳಿಂದ ಬಂಡೆಗಳ ಕುಸಿತ ಹಾಗೂ ಮಣ್ಣು ಜಾರುವಿಕೆ ಗಮನಾರ್ಹವಾಗಿ ಕಡಿಮೆ ಆಗಲಿದೆ. ಇದರಿಂದ ರೈಲುಗಳು ಸುರಕ್ಷಿತವಾಗಿ ಓಡಾಡಲಿದೆ. ಅಲ್ಲದೆ ಮಳೆಗಾಲದಲ್ಲಿ ಕೊಂಕಣ ರೈಲ್ವೆ ಮಾರ್ಗದಲ್ಲಿ 974 ಮಂದಿ ಸಿಬ್ಬಂದಿ ಗಸ್ತು ತಿರುಗಲಿದ್ದಾರೆ. ಅಲ್ಲದೆ ನಿರ್ಣಾಯಕ ಸ್ಥಳಗಳಲ್ಲಿ 24 ಗಂಟೆಗಳ ಕಾಲ ಕಾವಲುಗಾರರನ್ನು ನೇಮಿಸಲಾಗಿದೆ. ಅಲ್ಲದೆ ದುರ್ಬಲ ಸ್ಥಳಗಳಲ್ಲಿ ವೇಗ ನಿರ್ಬಂಧಗಳನ್ನು ವಿಧಿಸಲಾಗಿದೆ. ಅದೇ ರೀತಿ ಗೋಚರತೆ ಸೀಮಿತವಾದಾಗ ಭಾರಿ ಮಳೆಯಾಗುತ್ತಿರುವ ಸಂದರ್ಭ ರೈಲುಗಳನ್ನು 40 ಕಿ.ಮೀ. ವೇಗದಲ್ಲಿ ಓಡಿಸಲು ಲೋಕೋ ಪೈಲಟ್​ಗಳಿಗೆ ಸೂಚನೆ ನೀಡಲಾಗಿದೆ. ತುರ್ತು ವೈದ್ಯಕೀಯ ನೆರವು ನೀಡುವ ಎಂಆರ್ ವಿಎಂಗಳು, ಎಆರ್‌ಟಿ ಈಗಾಗಲೇ ಸಿದ್ಧವಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರೈಲುಗಳ ಸುರಕ್ಷಿತ ಓಡಾಟವನ್ನು ಖಚಿತಪಡಿಸಿಕೊಳ್ಳಲು ಬೇಲಾಪುರ, ರತ್ನಾಗಿರಿ ಮತ್ತು ಮಡ್ಗಾಂವ್‌ನಲ್ಲಿನ ನಿಯಂತ್ರಣ ಕೊಠಡಿಗಳು ಮಳೆಗಾಲದಲ್ಲಿ 24x7 ಕೆಲಸ ಮಾಡುತ್ತವೆ. ಮಾನ್ಸೂನ್ ಟೈಮ್ ಟೇಬಲ್ 2020ರ ಜೂನ್ 10ರಿಂದ 2020ರ ಅಕ್ಟೋಬರ್ 31ರವರೆಗೆ ಜಾರಿಗೆ ಬರಲಿದೆ. ಪ್ರಯಾಣಿಕರು ಮಳೆಗಾಲದಲ್ಲಿ ಆನ್‌ಲೈನ್‌ನಲ್ಲಿ www.konkanrailway.com ಗೆ ಭೇಟಿ ನೀಡುವ ಮೂಲಕ ಅಥವಾ ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡುವ ಮೂಲಕ ಅಥವಾ 139 ಡಯಲ್ ಮಾಡುವ ಮೂಲಕ ಕೆಆರ್‌ಸಿಎಲ್ ಆ್ಯಪ್ ಅನ್ನು ಪರಿಶೀಲಿಸಬಹುದು. ಕೊಂಕಣ ರೈಲ್ವೆ ಮುಂಬರುವ ಮಾನ್ಸೂನ್‌ನಲ್ಲಿ ತನ್ನ ಪ್ರಯಾಣಿಕರಿಗೆ ಸುರಕ್ಷಿತ ಪ್ರಯಾಣವನ್ನು ಖಾತರಿಪಡಿಸುವ ಗುರಿ ಹೊಂದಿದೆ ಎಂದು ಪ್ರಯಾಣಿಕರಿಗೆ ತಿಳಿಸಿದ್ದಾರೆ.

ABOUT THE AUTHOR

...view details