ದಕ್ಷಿಣಕನ್ನಡ:ಕಡಬ ತಾಲೂಕಿನ ಕೋಡಿಂಬಾಳದ ಕೊಠಾರಿ ನಿವಾಸಿ ಸ್ಪಪ್ನ ಹಾಗೂ ಅವರ ಮೂರು ವರ್ಷದ ಮಗುವಿನ ಮೇಲೆ ನಡೆದ ಆ್ಯಸಿಡ್ ದಾಳಿಗೆ ಸಂಬಂಧಿಸಿದಂತೆ, ಸಂತ್ರಸ್ತರಿಗೆ ನ್ಯಾಯ ದೊರಕಿಸಿ ಕೊಡುವಂತೆ ಒತ್ತಾಯಿಸಿ, ನೀತಿ ತಂಡದಿಂದ ಪುತ್ತೂರು ಬಾರ್ ಕೌನ್ಸಿಲ್ಗೆ ಮನವಿ ಪತ್ರ ನೀಡಲಾಯಿತು.
ಕೋಡಿಂಬಾಳ ಆ್ಯಸಿಡ್ ದಾಳಿ: ನ್ಯಾಯ ಒದಗಿಸಲು ಕೈಜೋಡಿಸುವಂತೆ ಪುತ್ತೂರು ವಕೀಲರ ಸಂಘಕ್ಕೆ ಮನವಿ
ಕಡಬ ತಾಲೂಕಿನ ಕೋಡಿಂಬಾಳದ ಕೊಠಾರಿ ನಿವಾಸಿ ಸ್ವಪ್ನ ಹಾಗೂ ಅವರ ಮೂರು ವರ್ಷದ ಮಗುವಿನ ಮೇಲೆ ನಡೆದ ಆ್ಯಸಿಡ್ ದಾಳಿಗೆ ಸಂಬಂಧಿಸಿದಂತೆ, ಸಂತ್ರಸ್ತರಿಗೆ ನ್ಯಾಯದೊರಕಿಸಿ ಕೊಡುವಂತೆ ಒತ್ತಾಯಿಸಿ, ನೀತಿ ತಂಡದಿಂದ ಪುತ್ತೂರು ಬಾರ್ ಕೌನ್ಸಿಲ್ಗೆ ಮನವಿ ಪತ್ರ ನೀಡಲಾಯಿತು.
ಕೋಡಿಂಬಾಳ ಆ್ಯಸಿಡ್ ದಾಳಿ: ನ್ಯಾಯ ಒದಗಿಸಲು ಕೈಜೋಡಿಸುವಂತೆ ನೀತಿ ತಂಡದಿಂದ ಪುತ್ತೂರು ವಕೀಲರ ಸಂಘಕ್ಕೆ ಮನವಿ
ಪುತ್ತೂರು ತಾಲೂಕು ವಕೀಲರ ಸಂಘದ ಅಧ್ಯಕ್ಷರಾದ ಮನೋಹರ್ ಕೆ.ವಿ. ಅವರಿಗೆ, ದಕ್ಷಿಣಕನ್ನಡ ನೀತಿ ತಂಡದ ಸಂಘಟನಾ ಕಾರ್ಯದರ್ಶಿ ಜೋಸ್ ತೋಮಸ್ ಅವರು ಮನವಿ ಪತ್ರ ನೀಡಿ, ಸಂತ್ರಸ್ತ ಮಹಿಳೆ ಹಾಗೂ ಮಗುವಿಗೆ ನ್ಯಾಯ ಒದಗಿಸಲು ಪುತ್ತೂರು ವಕೀಲರ ಸಂಘವು ಬೆಂಬಲ ನೀಡಬೇಕೆಂದು ವಿನಂತಿ ಮಾಡಿದರು.
ಇದಕ್ಕೆ ಪೂರಕವಾಗಿ ಮಾತನಾಡಿದ ವಕೀಲರ ಸಂಘದ ಅಧ್ಯಕ್ಷರಾದ ಮನೋಹರ್ ಕೆ.ವಿ ಹಾಗೂ ಪದಾಧಿಕಾರಿಗಳು, ನ್ಯಾಯಯುತವಾಗಿ ಸ್ಪಂದಿಸುವ ಭರವಸೆಯನ್ನು ನೀಡಿದರು.