ಮಂಗಳೂರು:ಜನವರಿ 10ರಿಂದ ಆರಂಭವಾಗಲಿರುವ ಈ ಸಾಲಿನ ಕರಾವಳಿ ಉತ್ಸವದ ಕುರಿತ ಪೂರ್ವಭಾವಿ ಸಭೆ ದಕ್ಷಿಣಕನ್ನಡ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.
ಜ.10ರಿಂದ ನಡೆಯುವ ಕರಾವಳಿ ಉತ್ಸವದಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಕ್ರೀಡಾಳುಗಳು..
ಸಿಂಗಾಪುರ, ಕಾಂಬೋಡಿಯಾ, ಇಂಡೋನೇಶ್ಯಾ, ಫಿಲಿಪೈನ್ಸ್, ಸ್ಕಾಟ್‍ಲ್ಯಾಂಡ್, ತುರ್ಕಿ, ಥಾಯ್‍ಲ್ಯಾಂಡ್, ನೆದರ್‍ಲ್ಯಾಂಡ್, ಹಾಲೆಂಡ್ ದೇಶದ ಗಾಳಿಪಟ ಹಾರಾಟಗಾರರು ಕರಾವಳಿ ಉತ್ಸವದ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲಿದ್ದಾರೆ.
ಈ ಸಾಲಿನ ಕರಾವಳಿ ಉತ್ಸವದ ಕೊನೆಯ ಮೂರು ದಿನ ಪಣಂಬೂರು ಬೀಚ್‍ನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಲಾಗಿದೆ. ದೇಶದ ನುರಿತ ಗಾಳಿಪಟ ಕ್ರೀಡಾಳುಗಳೊಂದಿಗೆ ಹಲವು ವಿದೇಶಿಗರೂ ಪಾಲ್ಗೊಂಡು ಉತ್ಸವದ ಮೆರುಗು ಹೆಚ್ಚಿಸಲಿದ್ದಾರೆ.
ಸಿಂಗಾಪುರ, ಕಾಂಬೋಡಿಯಾ, ಇಂಡೋನೇಶ್ಯಾ, ಫಿಲಿಪೈನ್ಸ್, ಸ್ಕಾಟ್‍ಲ್ಯಾಂಡ್, ತುರ್ಕಿ, ಥಾಯ್‍ಲ್ಯಾಂಡ್, ನೆದರ್‍ಲ್ಯಾಂಡ್, ಹಾಲೆಂಡ್ ದೇಶದ ಗಾಳಿಪಟ ಹಾರಾಟಗಾರರು ಕರಾವಳಿ ಉತ್ಸವದ ಗಾಳಿಪಟ ಉತ್ಸವದಲ್ಲಿ ಭಾಗವಹಿಸಲಿದ್ದಾರೆ. ಆಸ್ಟ್ರೇಲಿಯಾ ಹಾಗೂ ಜೂರಿಚ್ ರಾಷ್ಟ್ರದ ಗಾಳಿಪಟ ಹಾರಾಟಗಾರರು ಭಾಗವಹಿಸುವ ಬಗ್ಗೆಯೂ ಮಾತುಕತೆ ನಡೆಯುತ್ತಿದೆ. ಜಿಲ್ಲಾಡಳಿತದ ವತಿಯಿಂದ ಈಗಾಗಲೇ ಅಂತರರಾಷ್ಟ್ರೀಯ ಗಾಳಿಪಟ ಉತ್ಸವದ ಯಶಸ್ಸಿಗೆ ಉಪಸಮಿತಿ ರಚಿಸಲಾಗಿದೆ ಎಂದು ಡಿಸಿ ತಿಳಿಸಿದರು.
TAGGED:
ಜ.10 ರಿಂದ ಕರಾವಳಿ ಉತ್ಸವ