ಕರ್ನಾಟಕ

karnataka

ETV Bharat / state

ಕ್ಯಾಂಪ್ಕೊ ಅಧ್ಯಕ್ಷರಾಗಿ ಕಿಶೋರ್ ಕುಮಾರ್ ಕೊಡ್ಗಿ ಅವಿರೋಧ ಆಯ್ಕೆ - Mangalore News

ಕ್ಯಾಂಪ್ಕೊದ ನೂತನ ಅಧ್ಯಕ್ಷರಾಗಿ ಪ್ರಗತಿಪರ ಕೃಷಿಕ, ಉದ್ಯಮಿ ಅಮಾಸೆಬೈಲು ಕಿಶೋರ್ ಕುಮಾರ್ ಕೊಡ್ಗಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಕಿಶೋರ್ ಕುಮಾರ್ ಕೊಡ್ಗಿ
ಕಿಶೋರ್ ಕುಮಾರ್ ಕೊಡ್ಗಿ

By

Published : Dec 14, 2020, 3:08 PM IST

ಮಂಗಳೂರು:ಪ್ರಗತಿಪರ ಕೃಷಿಕ, ಉದ್ಯಮಿ ಅಮಾಸೆಬೈಲು ಕಿಶೋರ್ ಕುಮಾರ್ ಕೊಡ್ಗಿಯವರು ಕ್ಯಾಂಪ್ಕೊದ ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದು, ಶಂಕರ ನಾರಾಯಣ ಭಟ್ ಖಂಡಿಗೆಯವರು ಉಪಾಧ್ಯಕ್ಷರಾಗಿದ್ದಾರೆ. ಇಬ್ಬರೂ ಎರಡನೇ ಬಾರಿಗೆ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ನಗರದ ಕೊಡಿಯಾಲ್ ಬೈಲ್​ನಲ್ಲಿರುವ ಶಾರದಾ ವಿದ್ಯಾಲಯದ ಸಭಾಂಗಣದಲ್ಲಿ ಅಡಿಕೆ ಬೆಳೆಗಾರರ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಕ್ಯಾಂಪ್ಕೊದ 2019-20ನೇ ಸಾಲಿನ ವಾರ್ಷಿಕ ಮಹಾಸಭೆ ನಡೆಯಿತು. ಈ ಸಂದರ್ಭ ಕ್ಯಾಂಪ್ಕೊದ 2020-25 ಸಾಲಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆ ನಡೆಯಿತು.

ಅಧ್ಯಕ್ಷರಾಗಿ ಆಯ್ಕೆಯಾಗಿರುವ ಕಿಶೋರ್ ಕುಮಾರ್ ಕೊಡ್ಗಿಯವರು ರಾಜ್ಯದ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ.ಜಿ. ಕೊಡ್ಗಿ ಅವರ ಪುತ್ರ. ಕಿಶೋರ್ ಕುಮಾರ್ ಕೊಡ್ಗಿಯವರು ಕಳೆದ ಅವಧಿಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದು, ಹಾಲಿ ಅವಧಿಗೂ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿ ಇದೀಗ ಅಧ್ಯಕ್ಷರಾಗಿದ್ದಾರೆ. ಕೃಷಿ ಪದವೀಧರರಾಗಿರುವ ಅವರು ಗೋಕುಲ್ ಫುಡ್ ಇಂಡಸ್ಟ್ರೀಸ್ ಹಾಗೂ ಗೋಕುಲ್ ಕ್ಯಾಶ್ಯೂ ಇಂಡಸ್ಟ್ರೀಸ್‌ನ ಪಾಲುದಾರರಾಗಿದ್ದಾರೆ.

ABOUT THE AUTHOR

...view details