ದಕ್ಷಿಣಕನ್ನಡ :ಕಡಬ ತಾಲೂಕಿನ ಬಂಟ್ರ ಗ್ರಾಮದ ಕೋಡಂದೂರು ಸಮೀಪದ ಮನೆಯೊಂದರ ಶೆಡ್‌ಗೆ ನುಗ್ಗಿದ್ದ ಬೃಹತ್ ಗಾತ್ರದ ಕಾಳಿಂಗ ಸರ್ಪವೊಂದನ್ನು ಅರಣ್ಯ ಅಧಿಕಾರಿಗಳು ಮತ್ತು ಪೊಲೀಸರ ಸಹಕಾರದಿಂದ ಹಿಡಿದು ಕಾಡಿಗೆ ಬಿಟ್ಟ ಘಟನೆ ನಡೆದಿದೆ.
ಮಂಗಳವಾರ ಸಂಜೆ ಕಡಬ ಸಮೀಪದ ಕೋಡಂದೂರು ನಿವಾಸಿ ಲತೀಫ್ ಎಂಬುವರ ಮನೆಯ ಸಮೀಪದ ಶೆಡ್‌ಗೆ ಕಾಳಿಂಗ ಸರ್ಪವೊಂದು ನುಗ್ಗಿದೆ. ತಕ್ಷಣವೇ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರಿಗೆ ಮನೆಯವರು ಮಾಹಿತಿ ನೀಡಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಕಾಳಿಂಗ ಸರ್ಪವನ್ನ ಹಿಡಿದು ಅರಣ್ಯಕ್ಕೆ ಬಿಟ್ಟಿದ್ದಾರೆ.