ಮಂಗಳೂರು: 71 ವರ್ಷದ ವೃದ್ಧನನ್ನು ಅಪಹರಿಸಿ ಕೊಲೆಗೈದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನ ಕೋಣಾಜೆ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
71 ವರ್ಷದ ವೃದ್ಧನ ಅಪಹರಿಸಿ ಕೊಲೆ: ನಾಲ್ವರ ಬಂಧನ - ಮಂಗಳೂರು ವೃದ್ದನ ಅಪಹರಿಸಿ ಕೊಲೆ ಸುದ್ಧಿ
ಮಂಗಳೂರಿನ ಮಲಾರ್ನ ಪಳ್ಳಿಯಬ್ಬ (71) ಎಂಬ ವೃದ್ಧರೊಬ್ಬರನ್ನು ಅ. 29ರಂದು ಅಪಹರಿಸಿ ಇರಾ ಗ್ರಾಮದ ಮೂರೂರು ಡಬಲ್ ರೋಡ್ ನಿರ್ಜನ ಪ್ರದೇಶದ ಗುಡ್ಡ ಜಾಗದಲ್ಲಿ ಕೊಲೆ ಮಾಡಿ ಮೃತದೇಹವನ್ನು ಹೊಂಡ ತೆಗೆದು ಮುಚ್ಚಲಾಗಿತ್ತು. ಈ ಕೊಲೆ ಪ್ರಕರಣ ನಿನ್ನೆ ಬೆಳಕಿಗೆ ಬಂದಿದ್ದು, ಈ ಸಂಬಂಧ ಕೋಣಾಜೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಮಂಗಳೂರಿನ ಪಾವೂರು ಗ್ರಾಮದ ಹಂಝ (44), ಮೊಹಮ್ಮದ್ ಅಜರುದ್ದೀನ್ (27), ಸಜಿಪನಡು ಗ್ರಾಮದ ಅಮೀರ್ (26), ಅರ್ಫಾಜ್ (20 ) ಬಂಧಿತರು. ಪಳ್ಳಿಯಬ್ಬರನ್ನು ಹಣಕ್ಕಾಗಿ ಅಥವಾ ಬೇರೆ ಯಾವುದೋ ದ್ವೇಷದಿಂದ ಕೊಲೆ ಮಾಡಲಾಗಿದೆ ಎನ್ನಲಾಗಿದ್ದು, ಆರೋಪಿಗಳ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾದ ಇನ್ನೋರ್ವ ಆರೋಪಿ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆದಿದೆ.