ಪುತ್ತೂರು: ಮನೆಯಂಗಳದಲ್ಲಿ ಆಟವಾಡುತ್ತಿದ್ದ ಬಾಲಕ ಸ್ಥಳೀಯ ತೋಟದಲ್ಲಿದ್ದ ಈಜು ಕೊಳದಲ್ಲಿ ಬಿದ್ದು ಮೃತಪಟ್ಟ ಘಟನೆ ಪಾಣಾಜೆ ಗ್ರಾಮದ ಅಪಿನಿಮೂಲೆ ಎಂಬಲ್ಲಿ ಡಿ.24ರ ಸಂಜೆ ನಡೆದಿದೆ.
ಮೂರುವರೆ ವರ್ಷದ ಮಗು ಈಜುಕೊಳಕ್ಕೆ ಬಿದ್ದು ದುರ್ಮರಣ - ಪುತ್ತೂರಿನಲ್ಲಿ ಈಜುಕೊಳಕ್ಕೆ ಬಿದ್ದು ಬಾಲಕ ಸಾವು
ಪುತ್ತೂರು ತಾಲೂಕಿನ ಪಾಣಾಜೆ ಎಂಬಲ್ಲಿ ಆಟವಾಡುತ್ತಿದ್ದ ಮೂರುವರೆ ವರ್ಷದ ಮಗು ಈಜುಕೊಳಕ್ಕೆ ಬಿದ್ದು ಸಾವನ್ನಪ್ಪಿದ ದುರ್ಘಟನೆ ನಡೆದಿದೆ.
![ಮೂರುವರೆ ವರ್ಷದ ಮಗು ಈಜುಕೊಳಕ್ಕೆ ಬಿದ್ದು ದುರ್ಮರಣ kid dies after drowning in a swimming pool](https://etvbharatimages.akamaized.net/etvbharat/prod-images/768-512-10000702-thumbnail-3x2-crime.jpg)
ಈಜುಕೊಳಕ್ಕೆ ಬಿದ್ದು ದುರ್ಮರಣ
ಅಪಿನಮೂಲೆ ನಿವಾಸಿ ಅಬೂಬಕ್ಕರ್ ಸಿದ್ದಿಕ್ ಮತ್ತು ಆಶ್ಮಾ ದಂಪತಿಯ ಮೂರುವರೆ ವರ್ಷದ ಮಗ ಮಹಮ್ಮದ್ ಸಾನಿದ್ ಮೃತಪಟ್ಟ ಬಾಲಕ. ಡಿ.24ರಂದು ಸಂಜೆ ಮನೆಯಂಗಳದಲ್ಲಿ ಆಟವಾಡಿಕೊಂಡಿದ್ದ ಬಾಲಕ ಎಲ್ಲೂ ಕಾಣಿಸದೇ ಇದ್ದಾಗ ಸುತ್ತಮುತ್ತ ಹುಡುಕಾಡಿದ್ದಾರೆ. ಈ ವೇಳೆ ಆತ ಈಜು ಕೊಳದಲ್ಲಿ ಬಿದ್ದಿರುವುದು ಗೊತ್ತಾಗಿದೆ.
ತಕ್ಷಣ ಬಾಲಕನನ್ನು ನೀರಿನಿಂದ ಮೇಲಕ್ಕೆತ್ತಿ ಪುತ್ತೂರು ಸರಕಾರಿ ಆಸ್ಪತ್ತೆಗೆ ಕರೆ ತಂದಾಗ ಬಾಲಕ ಮೃತಪಟ್ಟಿದ್ದಾನೆ.