ಉಳ್ಳಾಲ: ದ್ವಿತೀಯ ಪಿಯುಸಿ ಎಕ್ಸಾಂ ಬರೆಯಲು ಕೇರಳ ಭಾಗದಿಂದ ಬಂದ ಸುಮಾರು 760 ವಿದ್ಯಾರ್ಥಿಗಳನ್ನು 12 ಖಾಸಗಿ ಕಾಲೇಜು ಮತ್ತು 22 ಕೆಎಸ್ಆರ್ಟಿಸಿ ಬಸ್ಸುಗಳ ವಿವಿಧ ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಯಿತು.
ದ್ವಿತೀಯ ಪಿಯುಸಿ ಎಕ್ಸಾಂ ಬರೆಯಲು ತಲಪಾಡಿಗೆ ಬಂದ ಕೇರಳದ ವಿದ್ಯಾರ್ಥಿಗಳು - Kerala
ದ್ವಿತೀಯ ಪಿಯುಸಿ ಎಕ್ಸಾಂ ಬರೆಯಲು ಕೇರಳ ಭಾಗದಿಂದ ಕರ್ನಾಟಕ ಗಡಿಭಾಗವಾದ ತಲಪಾಡಿಗೆ ಸುಮಾರು 760 ವಿದ್ಯಾರ್ಥಿಗಳು ಆಗಮಿಸಿದ್ದಾರೆ.

ತಲಪಾಡಿ ಗಡಿಭಾಗದವರೆಗೆ ವಿದ್ಯಾರ್ಥಿಗಳು ತಮ್ಮ ಪೋಷಕರ ಸಹಾಯದಿಂದ ಆಗಮಿಸಿದ್ದರು. ಬಳಿಕ ನೋಡೆಲ್ ಅಧಿಕಾರಿ ವಿಠಲ್ ಅಬೂರ ನೇತೃತ್ವದಲ್ಲಿ ವಿದ್ಯಾರ್ಥಿಗಳನ್ನು ಕುಂಜತ್ತೂರು ಮರಿಯಾಶ್ರಮ ಚರ್ಚ್ ಆವರಣದಲ್ಲಿ ಸೆಂಟರ್ಗಳ ಆಧಾರದಲ್ಲಿ ವಿಭಜಿಸಲಾಯಿತು. ಅಲ್ಲಿಂದ ಬಸ್ಸುಗಳಲ್ಲಿ ಅಂತರ ಕಾಪಾಡಿಕೊಂಡು ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಗಳಿಗೆ ಕಳುಹಿಸಲಾಗಿದೆ.
ವರ್ಕಾಡಿ ಸುಂಕದಕಟ್ಟೆ ಗಾಂಧಿನಗರ ನಿವಾಸಿ ಆಯೇಷಾ ಎಂಬಾಕೆ ವ್ಹೀಲ್ ಚೇರ್ ಮೂಲಕ ತಲಪಾಡಿಗೆ ಆಗಮಿಸಿದ್ದಾಳೆ. ಬಳಿಕ ಆಕೆಯನ್ನು ಹಝ್ರತ್ ಸೈಯ್ಯದ್ ಮದಿನ ಕಾಲೇಜಿನ ಪ್ರಾಂಶುಪಾಲೆ ಸಂಗೀತಾ ಅವರು ತಮ್ಮ ಕಾರಿನಲ್ಲೇ ತೊಕ್ಕೊಟ್ಟು ಸಂತ ಸೆಬಾಸ್ಟಿಯನ್ ಪರೀಕ್ಷಾ ಕೇಂದ್ರಕ್ಕೆ ಕರೆದುಕೊಂಡು ಹೋಗಿದ್ದಾರೆ.