ಮಂಗಳೂರು:ಹಿರಿಯ ಚಿಂತಕ, ಲೇಖಕ, ವಾಗ್ಮಿ ಲಕ್ಷ್ಮೀಶ ತೋಳ್ಪಾಡಿ ಅವರಿಗೆ ಈ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದೆ. ಇವರ 'ಮಹಾಭಾರತ ಅನುಸಂಧಾನದ ಭಾರತಯಾತ್ರೆ' ಎಂಬ ಪ್ರಬಂಧ ಕೃತಿಗೆ ಪ್ರಶಸ್ತಿ ಸಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಶಾಂತಿಗೋಡು ಗ್ರಾಮದವರಾದ ಲಕ್ಷ್ಮೀಶ ತೋಳ್ಪಾಡಿಯವರದ್ದು ಸಂತನಂತಹ ಬದುಕು. ಸದಾ ಆಧ್ಯಾತ್ಮಿಕ ಚಿಂತನೆ ಹೊಂದಿರುವವರು. ಜೊತೆಗೊಂದಿಷ್ಟು ಬರಹ, ಮಾತು, ಮೌನ ಎಲ್ಲವನ್ನೂ ಒಳಗಿಟ್ಟುಕೊಂಡವರು. ಇವರು ಬರೆದಿರುವ ಅನೇಕ ಲೇಖನಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಭಗವದ್ಗೀತೆಯ ಬಗೆಗಿನ 'ಮಹಾಯುದ್ಧಕ್ಕೆ ಮುನ್ನ' ತೋಳ್ಪಾಡಿಯವರ ಮೊದಲ ಪ್ರಕಟಿತ ಕೃತಿ.