ಮಂಗಳೂರು:ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಮೂಡಿಬಂದ ವೈಷ್ಣವ ಜನತೋ ವಿಶೇಷ ಗಾಯನದ ವಿಡಿಯೋಗೆ ಕೇಮಾರು ಮಠಾಧೀಶ ಈಶ ವಿಠಲದಾಸ ಸ್ವಾಮೀಜಿ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈಟಿವಿ ಭಾರತ ಪ್ರಸ್ತುತಪಡಿಸಿರುವ ವೈಷ್ಣವ ಜನತೋ ಗೀತೆಗೆ ಕೇಮಾರು ಶ್ರೀ ಶ್ಲಾಘನೆ - Vaishnava janatho special song
ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ 150ನೇ ಜನ್ಮದಿನಾಚರಣೆ ಪ್ರಯುಕ್ತ ಪ್ರಖ್ಯಾತ ಗಾಯಕರ ಸಿರಿಕಂಠದಲ್ಲಿ ಮೂಡಿಬಂದ ವೈಷ್ಣವ ಜನತೋ ವಿಶೇಷ ಗಾಯನದ ವಿಡಿಯೋ ಬಗ್ಗೆ ಕೇಮಾರು ಮಠಾಧೀಶ ಈಶ ವಿಠಲದಾಸ ಸ್ವಾಮೀಜಿ ಫೇಸ್‌ಬುಕ್, ಟ್ವಿಟರ್ನಲ್ಲಿ ಬರೆದುಕೊಂಡಿದ್ದು, ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
![ಈಟಿವಿ ಭಾರತ ಪ್ರಸ್ತುತಪಡಿಸಿರುವ ವೈಷ್ಣವ ಜನತೋ ಗೀತೆಗೆ ಕೇಮಾರು ಶ್ರೀ ಶ್ಲಾಘನೆ](https://etvbharatimages.akamaized.net/etvbharat/prod-images/768-512-4626761-thumbnail-3x2-jkgjtg.jpg)
ಈಟಿವಿ ಭಾರತ ಪ್ರಸ್ತುತಪಡಿಸಿದ ವೈಷ್ಣವ ಜನತೋ ಗಾಯನಕ್ಕೆ ಕೇಮಾರು ಶ್ರೀ ಶ್ಲಾಘನೆ
ಫೇಸ್‌ಬುಕ್, ಟ್ವಿಟರ್ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಸ್ವಾಮೀಜಿ, ಈಟಿವಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಸತ್ಯಸಂಧತೆ, ಪರೋಪಕಾರ, ತಾಳ್ಮೆ ಇವು ಆತ್ಮ ಸಾಕ್ಷಾತ್ಕಾರಕ್ಕೆ ರಹದಾರಿ. ಮಹಾತ್ಮ ಗಾಂಧೀಜಿ ಅವರು ಇದನ್ನು ತಮ್ಮ ಜೀವನದಲ್ಲಿ ಪಾಲಿಸಿಕೊಂಡು ಬಂದಿದ್ದರು. ಈಟಿವಿ ಭಾರತ ಇದನ್ನು ಜನಮಾನಸಕ್ಕೆ ಮುಟ್ಟಿಸುವಂತಹ ಕಾರ್ಯ ಮಾಡುತ್ತಿರುವುದು ಶ್ಲಾಘನೀಯ. ಇದು ಎಲ್ಲಾ ಜನರಿಗೆ ಮುಟ್ಟುವಂತಾಗಬೇಕು ಎಂದು ಅವರು ಟ್ವಿಟರ್, ಫೇಸ್ಬುಕ್ನಲ್ಲಿ ಬರೆದುಕೊಂಡಿದ್ದಾರೆ.