ಮಂಗಳೂರು: ಕೆ ಎಸ್ ಆರ್ ಟಿ ಸಿ ಬಸ್ ಗೆ ಡಿಕ್ಕಿ ಹೊಡೆದ ಪರಿಣಾಮ ಗ್ಯಾಸ್ ಟ್ಯಾಂಕರ್ ವೊಂದು ರಸ್ತೆ ವಿಭಜಕ ಏರಿದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಡೆದಿದೆ.
ಬಸ್ ಡಿಕ್ಕಿ: ರಸ್ತೆ ವಿಭಜಕ ಹತ್ತಿದ ಟ್ಯಾಂಕರ್ - ಟ್ಯಾಂಕರ್
ಟ್ಯಾಂಕರ್ ಹೋಗುತ್ತಿದ್ದ ರಸ್ತೆಗೆ ಏಕಾಏಕಿ ಕೆಸ್ಆರ್ಟಿಸಿ ಬಸ್ ಬಂದ ಕಾರಣ ಎರಡು ವಾಹನಗಳಿಗೆ ಡಿಕ್ಕಿಯಾದ ಘಟನೆ ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ಬಂಟ್ವಾಳ ತಾಲೂಕಿನ ತುಂಬೆಯಲ್ಲಿ ನಡೆದಿದೆ. ನಿಯಂತ್ರಣ ತಪ್ಪಿದ ಟ್ಯಾಂಕರ್ ರಸ್ತೆ ವಿಭಜಕವನ್ನೇರಿದೆ.

ಟ್ಯಾಂಕರ್ಗೆರ ಬಸ್ ಡಿಕ್ಕಿ : ರಸ್ತೆ ವಿಭಜಕವನ್ನೇರಿದ ಟ್ಯಾಂಕರ್
ಟ್ಯಾಂಕರ್ ಲಾರಿಯು ಬಿಸಿ ರೋಡ್ ಕಡೆಯಿಂದ ಮಂಗಳೂರಿಗೆ ಹೋಗುತ್ತಿತ್ತು. ಈ ಸಮಯದಲ್ಲಿ ಅದೇ ರಸ್ತೆಯಲ್ಲೇ ಚಲಿಸುತ್ತಿದ್ದ ಕೆ ಎಸ್ ಆರ್ ಟಿ ಸಿ ಬಸ್ ಏಕಾಏಕಿ ಲಾರಿ ಹೋಗುತ್ತಿದ್ದ ರಸ್ತೆ ಕಡೆ ಬಂದಿದೆ. ಇದರಿಂದ ಬಸ್ಗೆ ಡಿಕ್ಕಿ ಹೊಡೆದ ಟ್ಯಾಂಕರ್ ನಿಯಂತ್ರಣ ತಪ್ಪಿ ರಸ್ತೆ ವಿಭಜಕದ ಮೇಲೆ ಹೋಗಿದೆ. ಅದೃಷ್ಟವಶಾತ್ ಈ ಘಟನೆಯಿಂದ ಯಾವುದೇ ಪ್ರಾಣಾಪಾಯ ಸಂಬಂಧಿಸಿಲ್ಲ.