ಕರ್ನಾಟಕ

karnataka

ETV Bharat / state

ಷರತ್ತುಬದ್ಧವಾಗಿ ನಾಳೆಯಿಂದ ಕಾಸರಗೋಡು-ಮಂಗಳೂರು ಬಸ್ ಸಂಚಾರ ಆರಂಭ - ನಾಳೆಯಿಂದ ಕಾಸರಗೋಡು-ಮಂಗಳೂರು ಬಸ್ ಸಂಚಾರ ಆರಂಭ

ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್‌ಗಳ ಮೂಲಕ ಪ್ರಯಾಣಿಸುವವರು ಕೋವಿಡ್ ಲಸಿಕೆಯ ಕನಿಷ್ಠ ಒಂದು ಡೋಸ್ ಪಡೆದಿರುವ ಅಥವಾ 72 ಗಂಟೆಗಳ ಒಳಗೆ ಮಾಡಿಸಿರುವ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಆಯಾ ಬಸ್ ನಿರ್ವಾಹಕರು ಖಚಿತಪಡಿಸಕೊಳ್ಳಬೇಕು.

ಕಾಸರಗೋಡು-ಮಂಗಳೂರು ಬಸ್ ಸಂಚಾರ ಆರಂಭ
ಕಾಸರಗೋಡು-ಮಂಗಳೂರು ಬಸ್ ಸಂಚಾರ ಆರಂಭ

By

Published : Jul 18, 2021, 10:43 PM IST

ಮಂಗಳೂರು: ದ.ಕ.ಜಿಲ್ಲೆಯಲ್ಲಿ ಕೋವಿಡ್-19 ಅನ್ ಲಾಕ್ ಪ್ರಕ್ರಿಯೆ ಹಂತಹಂತವಾಗಿ ತೆರೆಯುತ್ತಿದ್ದು, ನಾಳೆಯಿಂದ ಷರತ್ತುಬದ್ಧವಾಗಿ ಕಾಸರಗೋಡು ಮತ್ತು ಮಂಗಳೂರು ನಡುವೆ ಬಸ್ ಸಂಚಾರಕ್ಕೆ ಅನುಮತಿ ನೀಡಿ ದ.ಕ.ಜಿಲ್ಲಾಧಿಕಾರಿ ಅನುಮತಿ ನೀಡಿದ್ದಾರೆ.

ಕಾಸರಗೋಡು-ಮಂಗಳೂರು ಬಸ್ ಸಂಚಾರ ಆರಂಭ

ಪ್ರಸ್ತುತ ಕರ್ನಾಟಕ ರಾಜ್ಯ ಸರಕಾರವು ಕೇರಳ ರಾಜ್ಯದಲ್ಲಿನ ಕೋವಿಡ್-19 ಪರಿಸ್ಥಿತಿಯನ್ನು ಅವಲೋಕಿಸಿ, ಜಿಲ್ಲೆಗೆ ಹೊಂದಿಕೊಂಡಿರುವ ಕೇರಳ ರಾಜ್ಯದ ಕಾಸರಗೋಡು ಜಿಲ್ಲೆಯಿಂದ ವಿದ್ಯಾಭ್ಯಾಸ, ಕಚೇರಿ ಕೆಲಸ, ವ್ಯಾಪಾರ ವಹಿವಾಟು ಸೇರಿದಂತೆ ಇತರ ಕಾರಣಗಳಿಗೆ ಸಂಖ್ಯೆಯಲ್ಲಿ ದಿನನಿತ್ಯ ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚಾರ ಮಾಡುತ್ತಿದ್ದಾರೆ. ಆದ್ದರಿಂದ ನಾಳೆಯಿಂದ ಕಾಸರಗೋಡು - ಮಂಗಳೂರು ನಡುವಿನ ಬಸ್ ಸಂಚಾರಕ್ಕೆ ಷರತ್ತುಬದ್ಧವಾಗಿ ಅನುಮತಿಸಲಾಗಿದೆ.

ಕೆಎಸ್ಆರ್ ಟಿಸಿ ಮತ್ತು ಖಾಸಗಿ ಬಸ್ ಗಳ ಮೂಲಕ ಪ್ರಯಾಣಿಸುವವರು ಕೋವಿಡ್ ಲಸಿಕ ಕನಿಷ್ಠ ಒಂದು ಡೋಸ್ ಪಡೆದಿರುವ ಅಥವಾ 72 ಗಂಟೆಗಳ ಒಳಗೆ ಮಾಡಿಸಿರುವ ಆರ್‌ಟಿ-ಪಿಸಿಆರ್ ಪರೀಕ್ಷೆಯ ನೆಗೆಟಿವ್ ವರದಿಯನ್ನು ಆಯಾ ಬಸ್ ನಿರ್ವಾಹಕರು ಖಚಿತಪಡಿಸಕೊಳ್ಳಬೇಕು.

ಅದೇ ರೀತಿ ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಮಾಡಿಕೊಳ್ಳುವುದು, ಸಾರ್ವಜನಿಕ ಅಂತರ ಕಾಪಾಡಿಕೊಳ್ಳುವುದು ಮಾಡಬೇಕು. ಇದನ್ನು ಉಲ್ಲಂಘಿಸುವ ಯಾವುದೇ ವ್ಯಕ್ತಿಗೆ ಕರ್ನಾಟಕ ಸಾಂಕ್ರಮಿಕ ರೋಗಗಳ ಅಧಿನಿಯಮ-2020, ವಿಪತ್ತು ನಿರ್ವಹಣಾ ಕಾಯ್ದೆ, 2005 ರಡಿ ಕಾನೂನು ಕ್ರಮವನ್ನು ಕೈಗೊಳ್ಳಲಾಗುವುದು ಜಿಲ್ಲಾ ವಿಪತ್ತು ನಿರ್ವಹಣ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ABOUT THE AUTHOR

...view details