ಕರ್ನಾಟಕ

karnataka

ETV Bharat / state

ಕಾಸರಗೋಡಿನ ವೈದ್ಯನ ಶವ ಕುಂದಾಪುರ ರೈಲ್ವೆ ಹಳಿಯ ಮೇಲೆ ಪತ್ತೆ - etv bharat kannada

ನವೆಂಬರ್ 8 ರಂದು ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವೈದ್ಯರು ತಮ್ಮ ಮೊಬೈಲ್ ಫೋನ್ ತೆಗೆದುಕೊಳ್ಳದೆ ಮಧ್ಯಾಹ್ನ ಕ್ಲಿನಿಕ್‌ನಿಂದ ಹೊರಟ ನಂತರ ಅವರು ಯಾರೊಂದಿಗೂ ಸಂಪರ್ಕಕ್ಕೆ ಬಂದಿಲ್ಲ. ನಂತರ ಅವರ ಬೈಕ್ ಕುಂಬಳೆಯಲ್ಲಿ ಬಿಟ್ಟು ಹೋಗಿರುವುದು ಪತ್ತೆಯಾಗಿದೆ.

ಕಾಸರಗೋಡಿನ ವೈದ್ಯನ ಶವ ಕುಂದಾಪುರ ರೈಲ್ವೆ ಹಳಿಯ ಮೇಲೆ ಪತ್ತೆ
Dentist of Kasargod found dead on Kundapur Railway Track

By

Published : Nov 11, 2022, 12:40 PM IST

ಕಾಸರಗೋಡು:ಮಲಯಾಳಿ ದಂತ ವೈದ್ಯರೊಬ್ಬರು ಕರ್ನಾಟಕದ ಕುಂದಾಪುರ ಎಂಬಲ್ಲಿ ರೈಲ್ವೆ ಹಳಿಯ ಮೇಲೆ ಶವವಾಗಿ ಪತ್ತೆಯಾಗಿದ್ದಾರೆ. ತನ್ನ ಕ್ಲಿನಿಕ್​​ಗೆ ಚಿಕಿತ್ಸೆಗಾಗಿ ಬಂದಿದ್ದ ಯುವತಿಯೊಬ್ಬಳ ಜೊತೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಈ ವೈದ್ಯರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾದ ನಂತರ ವೈದ್ಯರ ಶವ ಪತ್ತೆಯಾಗಿರುವುದು ಸಂಶಯಗಳಿಗೆ ಕಾರಣವಾಗಿದೆ.

ಮೃತರನ್ನು ಎಸ್. ಕೃಷ್ಣಮೂರ್ತಿ (52) ಎಂದು ಗುರುತಿಸಲಾಗಿದ್ದು, ಇವರು ಕಾಸರಗೋಡು ಜಿಲ್ಲೆ ಬದಿಯಡ್ಕ ನಿವಾಸಿಯಾಗಿದ್ದಾರೆ. ದಂತವೈದ್ಯರ ವಿರುದ್ಧ ಮಹಿಳೆಯ ಆರೋಪದ ನಂತರ, ಮಹಿಳೆಯ ಸಂಬಂಧಿಕರು ಕ್ಲಿನಿಕ್​ಗೆ ಬಂದು ವೈದ್ಯರ ಮೇಲೆ ಹಲ್ಲೆಗೆ ಯತ್ನಿಸಿದ್ದರು.

ನವೆಂಬರ್ 8 ರಂದು ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ವೈದ್ಯರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ವೈದ್ಯರು ತಮ್ಮ ಮೊಬೈಲ್ ಫೋನ್ ತೆಗೆದುಕೊಳ್ಳದೆ ಮಧ್ಯಾಹ್ನ ಕ್ಲಿನಿಕ್‌ನಿಂದ ಹೊರಟ ನಂತರ ಅವರು ಯಾರೊಂದಿಗೂ ಸಂಪರ್ಕಕ್ಕೆ ಬಂದಿಲ್ಲ. ನಂತರ ಅವರ ಬೈಕ್ ಕುಂಬಳೆಯಲ್ಲಿ ಬಿಟ್ಟು ಹೋಗಿರುವುದು ಪತ್ತೆಯಾಗಿದೆ.

ಗುರುವಾರ ಸಂಜೆ (10.11.2022) ಕೃಷ್ಣಮೂರ್ತಿ ಅವರ ಮೃತ ದೇಹವು ಕುಂದಾಪುರದ ರೈಲ್ವೆ ಹಳಿಯಲ್ಲಿ ಛಿದ್ರವಾದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಸಂಬಂಧಿಕರು ಆತನ ಬಟ್ಟೆಯಿಂದ ಮೃತದೇಹವನ್ನು ಗುರುತಿಸಿದ್ದಾರೆ. ಪೊಲೀಸ್ ಕೇಸ್ ನಿಂದ ಮನನೊಂದ ವೈದ್ಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪ್ರಾಥಮಿಕವಾಗಿ ತಿಳಿಯಲಾಗಿದೆ. ಆದರೆ ಈ ಪ್ರಕರಣವನ್ನು ಕಟ್ಟುಕಥೆ ಎಂದು ಅವರ ಕುಟುಂಬದವರು ಆರೋಪಿಸಿದ್ದಾರೆ.

ಜನರ ಗುಂಪೊಂದು ಕ್ಲಿನಿಕ್‌ಗೆ ಬಂದು ಬೆದರಿಕೆ ಹಾಕಿದ್ದರಿಂದಲೇ ವೈದ್ಯರು ಕ್ಲಿನಿಕ್​​ನಿಂದ ಹೊರಗೆ ಹೋಗಿದ್ದಾರೆ ಎಂಬ ದೂರು ಕೂಡ ಕೇಳಿ ಬಂದಿದೆ. ವೈದ್ಯರ ಸಾವಿನ ನಂತರ ಮಹಿಳೆಯ ಸಹೋದರ ಸೇರಿದಂತೆ ಐವರನ್ನು ಬದಿಯಡ್ಕ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಅವರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ಶೀಘ್ರದಲ್ಲೇ ಅವರನ್ನು ಬಂಧಿಸಲಾಗುವುದು ಎನ್ನಲಾಗಿದೆ.

ಇದನ್ನೂ ಓದಿ: ಯುವತಿಯರ ಮಧ್ಯೆ ಪ್ರೇಮಾಂಕುರ.. ಠಾಣೆಯ ಶೌಚಾಲಯದಲ್ಲೇ ವಿದ್ಯಾರ್ಥಿನಿ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಯತ್ನ

ABOUT THE AUTHOR

...view details