ಪುತ್ತೂರು:ರಾಷ್ಟ್ರದಲ್ಲಿ 13 ರಾಜ್ಯಗಳಲ್ಲಿ ನೆರೆ ಇದ್ದರೂ ಪ್ರಥಮವಾಗಿ ಅನುದಾನ ಬಿಡುಗಡೆ ಆದ್ದದ್ದು ಕರ್ನಾಟಕಕ್ಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ರು.
ನೆರೆ ಪೀಡಿತ 13 ರಾಜ್ಯಗಳಲ್ಲಿ ಕೇಂದ್ರದ ಮೊದಲ ಅನುದಾನ ಕರ್ನಾಟಕಕ್ಕೆ: ನಳಿನ್ ಕುಮಾರ್ ಕಟೀಲ್ - ಕರ್ನಾಟಕ್ಕೆ ನೆರೆ ಅನುದಾನ ಬಿಡುಗಡೆ
ದೇಶದಲ್ಲಿ 13 ರಾಜ್ಯಗಳಲ್ಲಿ ನೆರೆ ಇದ್ದರೂ ಪ್ರಥಮವಾಗಿ ಅನುದಾನ ಬಿಡುಗಡೆ ಆದ್ದದ್ದು ಕರ್ನಾಟಕಕ್ಕೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ರು.
ಕೆಯುಐಡಿಎಫ್‍ಸಿ ಹಾಗೂ ಪುತ್ತೂರು ನಗರಸಭೆ ಜಂಟಿ ಸಹಯೋಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ನಳಿನ್ ಕುಮಾರ್ ಕಟೀಲ್ ಮಾತನಾಡಿದರು. ಎಡಿಬಿ ಯೋಜನೆಯಡಿ ರೂ. 112.08 ಕೋಟಿ ವೆಚ್ಚದಲ್ಲಿ ಪುತ್ತೂರು ನಗರಕ್ಕೆ ನಿರಂತರ ಕುಡಿಯುವ ನೀರು ಸರಬರಾಜು ಯೋಜನೆಗೆ ಚಿಕ್ಕಮುಡ್ನೂರು ಗ್ರಾಮದ ಕೆಮ್ಮಾಯಿಯಲ್ಲಿ ಶಿಲಾನ್ಯಾಸ ಮತ್ತು ಪುರಭವನದಲ್ಲಿ ಯೋಜನೆಗಳ ಕಾಮಗಾರಿಗಳಿಗೆ ಚಾಲನೆ ನೀಡಿದರು. ನಗರದ 30 ವರ್ಷ ಹಳೆಯ ರಸ್ತೆಗಳು, ಕುಡಿಯುವ ನೀರಿನ ಪೈಪ್‍ಗಳು ಸೇರಿ ಒಟ್ಟು ಯೋಜನೆಗಳಿಲ್ಲದೆ ಮಾಡಿದ ಕಾರ್ಯದ ಪರಿಣಾಮವಾಗಿ ಸಮಸ್ಯೆ ಉಂಟಾಗಿದೆ. ಈ ಎಲ್ಲಾ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಶಾಸಕರು ಮುತುವರ್ಜಿ ವಹಿಸಿದ್ದಾರೆ. ಪುತ್ತೂರು ನಗರಕ್ಕೆ ಮುಂದಿನ 30 ವರ್ಷಗಳಿಗೆ ಸಮರ್ಪಕವಾಗಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಗೊಳಿಸಲು ರೂ. 113.08 ಕೋಟಿಯ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಯೋಜನೆ ಯಶಸ್ವಿಯಾಗಲಿ. ಪುತ್ತೂರಿನ ಜನತೆ ನಿರಂತರವಾಗಿ ಕುಡಿಯುವ ನೀರಿನ ಬಳಕೆ ಮಾಡಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಶಾಸಕ ಸಂಜೀವ ಮಠಂದೂರು ಮಾತನಾಡಿ, ಪುತ್ತೂರಿನ ಜನತೆ ತಮ್ಮ ಕಲುಷಿತ ನೀರನ್ನು ಮತ್ತೆ ತಾವೇ ಕುಡಿಯಬಾರದು ಎಂಬುದು ನನ್ನ ಉದ್ದೇಶ. ಈಗಾಗಲೇ ಕಲುಷಿತ ನೀರು ಹಳ್ಳಗಳ ಮೂಲಕ ನೇತ್ರಾವತಿ ನದಿಗೆ ಸೇರುತ್ತಿದೆ. ಅದನ್ನು ಮತ್ತೆ ಶುದ್ಧೀಕರಿಸಿ ಕುಡಿಯುವ ಪರಿಸ್ಥಿತಿ ಇದೆ. ಈ ನಿಟ್ಟಿನಲ್ಲಿ ಪುತ್ತೂರಿಗೆ ಸಮರ್ಪವಾಗಿ ಅಂಡರ್ ಡ್ರೈನೇಜ್ ಸಿಸ್ಟಮ್ ಆಗಬೇಕು. ಅದಕ್ಕಾಗಿ ಹಿಂದೆ ರೂ. 125 ಕೋಟಿ ಅನುದಾನ ಮಂಜೂರುಗೊಂಡಿತ್ತು. ಇದೀಗ ಅದನ್ನು ಮತ್ತೆ ಪುನರುಜ್ಜೀವನಗೊಳಿಸುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.