ಕರ್ನಾಟಕ

karnataka

ETV Bharat / state

ಅಕ್ಕನ ಮಕ್ಕಳಿಗೆ ತಿಂಡಿ ತರಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿ ಶವವಾಗಿ ಪತ್ತೆ - ಕನ್ಯಾನ ಗ್ರಾಮ‌

ಕೆಲ ದಿನಗಳಿಂದ ನಾಪತ್ತೆಯಾಗಿದ್ದ ಕನ್ಯಾನ ವ್ಯಕ್ತಿಯ ಮೃತದೇಹ ಪೆರುವಾಯಿಯ ನೆಕ್ಕರೆ ಹೊಳೆಯಲ್ಲಿ ಪತ್ತೆಯಾಗಿದೆ.

Dead body found
Dead body found

By

Published : Aug 12, 2020, 7:04 PM IST

ಬಂಟ್ವಾಳ:ಅಕ್ಕನ ಮಕ್ಕಳಿಗೆ ತಿಂಡಿ ತಿನಿಸುಗಳನ್ನು ತರಲೆಂದು ಪೇಟೆಗೆ ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ನೆಕ್ಕರೆ ಹೊಳೆಯಲ್ಲಿ ಪತ್ತೆಯಾಗಿದೆ.

ಕನ್ಯಾನ ಗ್ರಾಮದ ನಂದರಬೆಟ್ಟು ನಿವಾಸಿ ಸತೀಶ್ (44) ಮೃತದೇಹ ಸಮೀಪದ ಪೆರುವಾಯಿಯ ನೆಕ್ಕರೆ ಹೊಳೆಯಲ್ಲಿ ಇಂದು ಪತ್ತೆಯಾಗಿದೆ.

ಸತೀಶ್ ಬಂಟ್ವಾಳದಲ್ಲಿ ಭತ್ತ ಕಟಾವು ಮಾಡುವ ಕೆಲಸ ಮಾಡುತ್ತಿದ್ದ. ಭಾನುವಾರ ಕೆಲಸ ಮುಗಿಸಿಕೊಂಡು ಕನ್ಯಾನದಲ್ಲಿರುವ ಮನೆಯ ಕಡೆ ಬಂದಿದ್ದರು. ಬಳಿಕ ಅಕ್ಕನ ಮಕ್ಕಳಿಗೆ ತಿಂಡಿ ತರಲೆಂದು ಸಮೀಪದ ಅಂಗಡಿಗೆಂದು ತೆರಳಿದವರು ಮನೆಗೆ ಬರದೆ ಕಾಣೆಯಾಗಿದ್ದಾರೆ ಎಂದು ಸಹೋದರ ಆಶೋಕ್ ದೂರು ನೀಡಿದ್ದರು.

ನಂದರಬೆಟ್ಟು ಎಂಬಲ್ಲಿನ ತೋಡಿನ ಸಮೀಪದ ಗಿಡದ ಪೊದೆಯ ಮಧ್ಯೆ ಸತೀಶ್ ಅವರು ಧರಿಸಿದ ಬಟ್ಟೆ ಹಾಗೂ ಕೊಡೆ ಕಂಡುಬಂದಿದ್ದು, ಇವರು ಆಕಸ್ಮಿಕವಾಗಿ ಕಾಲು ಜಾರಿ ತೋಡಿಗೆ ಬಿದ್ದು ನಾಪತ್ತೆಯಾಗಿರಬೇಕು ಎಂಬ ಸಂಶಯವನ್ನು ಕುಟುಂಬಸ್ಥರು ವ್ಯಕ್ತಪಡಿಸಿದ್ದರು.

ಇದೀಗ ಸತೀಶ್​ ಅವರ ಮೃತದೇಹ ಪತ್ತೆಯಾಗಿದ್ದು, ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ, ಮಹಜರು ನಡೆಸಿದ ಬಳಿಕ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ABOUT THE AUTHOR

...view details