ಮಂಗಳೂರು :ಕಂಬಳ ಕ್ರೀಡೆಯ ಪ್ರಸಿದ್ಧ ಓಟಗಾರ ಶ್ರೀನಿವಾಸ ಗೌಡ ಅವರಿಗೆ ವ್ಯಕ್ತಿಯೋರ್ವ ನಿಂದನೆ ಮಾಡಿದ್ದಾರೆಂದು ಆರೋಪಿಸಿ ಮೂಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕಂಬಳ ಕ್ಷೇತ್ರದ ಅತೀ ವೇಗದ ಓಟಗಾರ ಎಂದು ಖ್ಯಾತಿ ಗಳಿಸಿರುವ ಶ್ರೀನಿವಾಸ ಗೌಡ ಅವರಿಗೆ ನಿನ್ನೆ ದೂರವಾಣಿ ಕರೆ ಮಾಡಿರುವ ಪ್ರಶಾಂತ್ ಎಂಬಾತ ಅವಾಚ್ಯ ಶಬ್ಧ ಬಳಸಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಕರೆ ಮಾಡಿದ್ದ ಪ್ರಶಾಂತ್ ಎಂಬಾತ ಕಂಬಳದ ಕುರಿತು ಮಾತನಾಡಿದ್ದು, ಈ ವೇಳೆ ಶ್ರೀನಿವಾಸ್ ಗೌಡನ ವಿರುದ್ಧ ಹಾಗೂ ಅವರ ಕುಟುಂಬಸ್ಥರ ವಿರುದ್ಧ ಅವಾಚ್ಯ ಶಬ್ದಗಳನ್ನ ಬಳಸಿ ನಿಂದಿಸಿದ್ದಾನೆ. ಈ ಹಿನ್ನೆಲೆ ಶ್ರೀನಿವಾಸ ಗೌಡ ಮೂಡುಬಿದ್ರಿ ಪೊಲೀಸ್ ಠಾಣೆಯಲ್ಲಿ ನಿಂದನೆ ಆರೋಪದಡಿ ದೂರು ದಾಖಲಿಸಿದ್ದಾರೆ.