ಮಂಗಳೂರು: ಬ್ರೂ ಕಾಫಿ ಪೌಡರ್ ಆರ್ಟ್ನಲ್ಲಿ ಕಂಬಳ ವೀರ ಶ್ರೀನಿವಾಸ ಗೌಡರ ಚಿತ್ರ ಮೂಡಿದ್ದು, ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಶ್ರವಣ್ ಪೂಜಾರಿ ಮಾರ್ನಾಡ್ ಕೈಚಳಕದಿಂದ ಈ ಆರ್ಟ್ ರಚನೆಯಾಗಿದೆ.
ಬ್ರೂ ಕಾಫಿ ಪೌಡರ್ನ್ನು ನೀರಿನಲ್ಲಿ ಕಲಸಿ ಈ ಆರ್ಟ್ ರಚಿಸಲಾಗುತ್ತದೆ. ಮೊದಲಿಗೆ ಪೆನ್ಸಿಲ್ನಲ್ಲಿ ಸ್ಕೆಚ್ ಮಾಡಿ ಆ ಬಳಿಕ ಅದಕ್ಕೆ ನೀರು ಕಲಸಿರುವ ಕಾಫಿಯಿಂದ ಬಣ್ಣ ತುಂಬಿಸಲಾಗುತ್ತದೆ. ಎ4 ವಾಟರ್ ಕಲರ್ ಶೀಟ್ನಲ್ಲಿ ಈ ಚಿತ್ರವನ್ನು ರಚನೆ ಮಾಡಿದ್ದು, ಮೊನ್ನೆ ರಚನೆ ಮಾಡಲು ಆರಂಭಿಸಿ ನಿನ್ನೆಗೆ ಪೂರ್ತಿಯಾಗಿದೆ. ಈ ಚಿತ್ರವನ್ನು ಕಂಬಳ ಶ್ರೀನಿವಾಸ ಗೌಡರಿಗೆ ತಲುಪಿಸಬೇಕೆಂದು ಶ್ರವಣ್ ಪೂಜಾರಿಯವರು ಹೇಳಿದರು.
ಆಳ್ವಾಸ್ ಕಾಲೇಜಿನ ವಿದ್ಯಾರ್ಥಿ ಶ್ರವಣ್ ಪೂಜಾರಿ ಶ್ರವಣ್ ಪೂಜಾರಿ ಮಾರ್ನಾಡ್ ಆಳ್ವಾಸ್ ಕಾಲೇಜಿನ ವಿಶ್ವಲ್ ಆರ್ಟ್ನ ದ್ವಿತೀಯ ವರ್ಷದ ವಿದ್ಯಾರ್ಥಿಯಾಗಿದ್ದಾರೆ. ಅವರು ಈ ಹಿಂದೆ ಶಾಸಕರಾದ ಹರೀಶ್ ಪೂಂಜಾ, ಡಾ.ವೈ.ಭರತ್ ಶೆಟ್ಟಿ, 'ಮಜಾಟಾಕೀಸ್' ಖ್ಯಾತಿಯ ಸೃಜನ್ ಲೋಕೇಶ್, ಸಂಸದ ತೇಜಸ್ವಿ ಸೂರ್ಯ, ವಿನಯ್ ಗುರೂಜಿ, ಡಾ. ಎಂ.ಮೋಹನ್ ಆಳ್ವರ ಬ್ರೂ ಕಾಫಿ ಪೌಡರ್ ಆರ್ಟನ್ನು ರಚನೆ ಮಾಡಿದ್ದಾರಂತೆ. ಶ್ರವಣ್ ಪೂಜಾರಿ ಬ್ರೂ ಕಾಫಿ ಪೌಡರ್ ಆರ್ಟ್ ಅಲ್ಲದೆ ಪೆನ್ಸಿಲ್ ಆರ್ಟ್, ಚಾರ್ಕೋಲ್ ಶೀಟ್ ಆರ್ಟ್, ವಾಲ್ ಪೇಂಟಿಂಗ್, ವಾಟರ್ ಪೇಂಟಿಂಗ್ ಸೇರಿದಂತೆ ಮತ್ತಿತರ ಚಿತ್ರಕಲೆಗಳಲ್ಲಿಯೂ ಇವರು ನಿಪುಣರಾಗಿದ್ದಾರೆ.
ಒಟ್ಟಿನಲ್ಲಿ ಬ್ರೂ ಕಾಫಿ ಪೌಡರ್ ಘಮದೊಂದಿಗೆ ಕಂಬಳ ವೀರ ಶ್ರೀನಿವಾಸ ಗೌಡರ ಚಿತ್ರ ಮೂಡಿದ್ದು, ಇದಕ್ಕೆ ಎಲ್ಲೆಡೆ ಉತ್ತಮ ಪ್ರಶಂಸೆ ವ್ಯಕ್ತವಾಗಿದೆ.