ಕರ್ನಾಟಕ

karnataka

ETV Bharat / state

ಕಳಿಯ ಸಹಕಾರಿ ಸಂಘದಿಂದ 800 ರೈತರಿಗೆ ಉಚಿತ ಮೈಲುತುತ್ತು ವಿತರಣೆ - kaliya co-operative bank

ಕಳಿಯ ಸಹಕಾರಿ ಸಭಾ ಭವನದಲ್ಲಿ ನಡೆದ ವಿತರಣಾ ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು ರೈತರಿಗೆ ಉಚಿತವಾಗಿ ಮೈಲುತುತ್ತು ವಿತರಿಸಿದರು.

kaliya-co-operative-society
ಕಳಿಯ ಸಹಕಾರಿ ಸಂಘ

By

Published : May 9, 2020, 1:54 PM IST

ಬೆಳ್ತಂಗಡಿ : ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಗೇರುಕಟ್ಟೆ ವತಿಯಿಂದ ಸಂಘದ ಕಾರ್ಯವ್ಯಾಪ್ತಿಗೆ ಒಳಪಡುವ ಕಳಿಯ, ನ್ಯಾಯತರ್ಪು ಮತ್ತು ಓಡಿಲ್ನಾಳ ಗ್ರಾಮದ ಸುಮಾರು 800 ರೈತರಿಗೆ ನಿಗದಿತ ಪ್ರಮಾಣದಲ್ಲಿ ಉಚಿತ ಮೈಲುತುತ್ತು ವಿತರಣೆ ಮಾಡಲಾಗಿದೆ.

ಕಳಿಯ ಸಹಕಾರಿ ಸಭಾ ಭವನದಲ್ಲಿ ನಡೆದ ವಿತರಣಾ ಕಾರ್ಯಕ್ರಮದಲ್ಲಿ ಸಹಕಾರಿ ಸಂಘದ ಅಧ್ಯಕ್ಷ ವಸಂತ ಮಜಲು ರೈತರಿಗೆ ಮೈಲುತುತ್ತು ವಿತರಿಸಿದರು. ಜೊತೆಗೆ ಹಗಲು ರಾತ್ರಿಯೆನ್ನದೆ ಕೊರೊನಾ ರೋಗದ ವಿರುದ್ಧ ಹೋರಾಡುತ್ತಿರುವ ದೇಶದ ಎಲ್ಲಾ ಕೊರೊನಾ ವಾರಿಯರ್ಸ್‌ಗೆ ಸಂಘದ ಪರವಾಗಿ ಅಭಿನಂದನೆ ಸಲ್ಲಿಸಿದರು.

ಕಳಿಯ ಸಹಕಾರಿ ಸಂಘದ ರೈತರಿಗೆ ಮೈಲುತುತ್ತು ವಿತರಣೆ, ಕೊರೊನಾ ವಾರಿಯರ್ಸ್‌ ಬಗ್ಗೆ ಪ್ರಶಂಸೆ

ಈ ಸಂದರ್ಭದಲ್ಲಿ ಉಪಾಧ್ಯಕ್ಷ ನಾಣ್ಯಪ್ಪ ಪೂಜಾರಿ, ನಿರ್ದೇಶಕರುಗಳಾದ ದೇವಣ್ಣ ಮೂಲ್ಯ, ರಾಜೀವ ಗೌಡ ಮತ್ತಿತರರು ಇದ್ದರು.

ABOUT THE AUTHOR

...view details