ಮಂಗಳೂರು: ಮೂಡುಬಿದಿರೆ ತಾಲೂಕಿನ ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಗೆ (ತ್ರಿಭುವನ ತಿಲಕ ಚೂಡಾಮಣಿ ಬಸದಿ) ಶಿವ ತಾಂಡವ ಸ್ತೋತ್ರ ಖ್ಯಾತಿಯ ಕಾಳಿ ಚರಣ್ ಮಹಾರಾಜ್ ಸ್ವಾಮೀಜಿ ರವಿವಾರ ಭೇಟಿ ನೀಡಿದರು.
ಮೂಡುಬಿದಿರೆ ಸಾವಿರ ಕಂಬದ ಬಸದಿಗೆ ಕಾಳಿ ಚರಣ್ ಮಹಾರಾಜ್ ಸ್ವಾಮೀಜಿ ಭೇಟಿ... - Kali Charan Maharaj Swamiji
ಮೂಡುಬಿದಿರೆ ತಾಲೂಕಿನ ಸಾವಿರ ಕಂಬದ ಬಸದಿಯ ಚಂದ್ರನಾಥ ಸ್ವಾಮಿ ಆಲಯ ಕ್ಷೇತ್ರಪಾಲ ದೇವರು, ನಾಗಾಲಯಗಳಿಗೆ ಶಿವ ತಾಂಡವ ಸ್ತೋತ್ರ ಖ್ಯಾತಿಯ ಕಾಳಿ ಚರಣ್ ಮಹಾರಾಜ್ ಸ್ವಾಮೀಜಿ ಭೇಟಿ ನೀಡಿ ದರ್ಶನ ಪಡೆದರು.
![ಮೂಡುಬಿದಿರೆ ಸಾವಿರ ಕಂಬದ ಬಸದಿಗೆ ಕಾಳಿ ಚರಣ್ ಮಹಾರಾಜ್ ಸ್ವಾಮೀಜಿ ಭೇಟಿ... Kali Charan Maharaj Swamiji](https://etvbharatimages.akamaized.net/etvbharat/prod-images/768-512-9224860-407-9224860-1603037724556.jpg)
ಕಾಳಿ ಚರಣ್ ಮಹಾರಾಜ್ ಸ್ವಾಮೀಜಿ
ಕಾಳಿ ಚರಣ್ ಮಹಾರಾಜ್ ಸ್ವಾಮೀಜಿ ಮೂಡುಬಿದಿರೆ ತಾಲೂಕಿನ ಇತಿಹಾಸ ಪ್ರಸಿದ್ಧ ಸಾವಿರ ಕಂಬದ ಬಸದಿಗೆ ಭೇಟಿ ನೀಡಿದರು.
ಸಾವಿರ ಕಂಬದ ಬಸದಿಯ ಚಂದ್ರನಾಥ ಸ್ವಾಮಿ ಆಲಯ ಕ್ಷೇತ್ರಪಾಲ ದೇವರು, ನಾಗಾಲಯಗಳಿಗೆ ಭೇಟಿ ನೀಡಿ ದರ್ಶನ ಪಡೆದರು. ಬಸದಿಯ ವಾಸ್ತು ಶಿಲ್ಪಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಕಾಳಿ ಚರಣ್ ಮಹಾರಾಜ್ ಸ್ವಾಮೀಜಿಯವರು ಬಸದಿಯ ವಾಸ್ತು ವೈಭವಕ್ಕೆ ಬೆರಗಾಗಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯ ಪ್ರಸಾದ್ ಕುಮಾರ್, ಜವನೆರ್ ಬೆದ್ರ ಸಂಘಟನೆಯ ಅಧ್ಯಕ್ಷ ಅಮರ್ ಕೋಟೆ, ಉದ್ಯಮಿ ಪ್ರತೀಕ್ ಶೆಟ್ಟಿ ಎಕ್ಕಾರು, ಅಭಿಲಾಷ್, ಕಿಶೋರ್, ರಂಜಿತ್ ಪೂಜಾರಿ, ಹರೀಶ್ ಎಂ.ಕೆ, ನಾಗವರ್ಮ ಜೈನ್ ಮತ್ತಿತರರು ಉಪಸ್ಥಿತರಿದ್ದರು.