ಕರ್ನಾಟಕ

karnataka

ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕುಟುಂಬ, ವೃದ್ಧೆ ಅಸ್ವಸ್ಥ

By

Published : Mar 15, 2021, 9:03 PM IST

ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ದ ದೂರು ನೀಡಲಾಗಿದ್ದರೂ, ಇಲ್ಲಿಯತನಕ ಯಾವುದೇ ಪ್ರಕರಣ ದಾಖಲಿಸಲಾಗಿಲ್ಲ. ಹಾಗಾಗಿ ಕೂಡಲೇ ಈ ಬಗ್ಗೆ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕಡಬ ತಹಸೀಲ್ದಾರ್ ಕಚೇರಿಯ ಎದುರು ಭಾಗದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ವೃದ್ಧ ಮಹಿಳೆ ಅಸ್ವತ್ಥರಾಗಿ ಕುಸಿದು ಬಿದ್ದಿದ್ದಾರೆ.

Old age fasting women was ill
ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ವೃದ್ಧೆ ಅಸ್ವತ್ಥ

ಕಡಬ: ಅರಣ್ಯಾಧಿಕಾರಿಗಳು ರಾತ್ರೋ ರಾತ್ರಿ ಮನೆಗೆ ನುಗ್ಗಿ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿ, ಅಧಿಕಾರಿಗಳಿಗೆ ಹಲವಾರು ಬಾರಿ ದೂರು ನೀಡಿದ್ರೂ ಇಲ್ಲಿಯತನಕ ಯಾವುದೇ ಪ್ರಕರಣ ದಾಖಲಿಸದ ಹಿನ್ನೆಲೆ ಕುಟುಂಬವೊಂದು ನೀತಿ ಸಾಮಾಜಿಕ ಸಂಘಟನೆಯ ನೇತೃತ್ವದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿತ್ತು. ಇದೀಗ ಇದರಲ್ಲಿ ಭಾಗವಹಿಸಿದ್ದ, ವೃದ್ಧ ಮಹಿಳೆ ಸೀತಮ್ಮ ಎಂಬುವರು ಕುಸಿದು ಬಿದ್ದಿದ್ದಾರೆ.

ಅಮರಣಾಂತ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಕುಟುಂಬ

ಐತ್ತೂರು ಗ್ರಾಮದ ಮೂಜೂರು ಪದ್ಮಯ್ಯ ಗೌಡ ಎಂಬುವರ ಮನೆಗೆ ರಾತ್ರೋ ರಾತ್ರಿ ಅರಣ್ಯ ಸಂಚಾರಿ ದಳದ ಅಧಿಕಾರಿ ಸಂಧ್ಯಾ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸುವ ನೆಪದಲ್ಲಿ ಮನೆ ಮಂದಿಯ ಮೇಲೆ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಈ ದೌರ್ಜನ್ಯ ಎಸಗಿದ ಅಧಿಕಾರಿಗಳ ವಿರುದ್ದ ದೂರು ನೀಡಲಾಗಿದ್ದರೂ, ಇಲ್ಲಿ ತನಕ ಪ್ರಕರಣ ದಾಖಲಿಸಲಾಗಿಲ್ಲ. ಹಾಗಾಗಿ ಕೂಡಲೇ ಈ ಬಗ್ಗೆ ಅಧಿಕಾರಿಗಳ ಮೇಲೆ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಕಡಬ ತಹಸೀಲ್ದಾರ್ ಕಚೇರಿಯ ಎದುರು ಭಾಗದಲ್ಲಿ ಅಮರಣಾಂತ ಉಪವಾಸ ಸತ್ಯಾಗ್ರಹ ಪ್ರಾರಂಭಿಸಲಾಗಿದೆ. ಸತ್ಯಾಗ್ರಹದಲ್ಲಿ ಪ್ರಸಾದ್ ಅವರ ತಂದೆ ಪದ್ಮಯ್ಯ ಗೌಡ, ತಾಯಿ ಸೀತಮ್ಮ, ಪತ್ನಿ ದೀಕ್ಷಿತಾ, ನೀತಿ ತಂಡದ ರಾಜ್ಯಾಧ್ಯಕ್ಷ ಜಯನ್.ಟಿ ಸೇರಿದಂತೆ ಹಲವರು ಸಾಥ್ ಇದ್ದರು.

ಇದನ್ನೂ ಓದಿ:ಅರಣ್ಯಾಧಿಕಾರಿಗಳಿಂದ ದೌರ್ಜನ್ಯ: ಕಡಬ ತಹಶೀಲ್ದಾರ್ ಕಚೇರಿ ಮುಂದೆ ಕುಟುಂಬದಿಂದ ಸತ್ಯಾಗ್ರಹ

ಇದೀಗ ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಕೊಂಡಿದ್ದ ಪ್ರಸಾದ್ ಅವರ ತಾಯಿ ಸೀತಮ್ಮ ಎಂಬುವರು ಅಸ್ವಸ್ಥತರಾಗಿ ಬಿದ್ದಿದ್ದಾರೆ. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ. ಸೀತಮ್ಮ ಅವರು ಸಕ್ಕರೆ ಕಾಯಿಲೆ ಸೇರಿದಂತೆ ಇತರ ಕಾಯಿಲೆಗಳಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಬೆಳಗ್ಗೆನಿಂದ ಆರಂಭವಾದ ಉಪವಾಸ ಸತ್ಯಾಗ್ರಹಕ್ಕೆ ಕಡಬ ತಹಶೀಲ್ದಾರ್​​ ಹೊರತುಪಡಿಸಿ ಯಾವುದೇ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ABOUT THE AUTHOR

...view details