ಸುಳ್ಯ :ಕಡಬ ಗ್ರಾಮ ಪಂಚಾಯತ್ ವತಿಯಿಂದ 14ನೇ ಹಣಕಾಸು ಯೋಜನೆಯ ಮೊತ್ತವನ್ನು ಬಳಸಿ ಸುಮಾರು 1000 ಆಹಾರ ಕಿಟ್ಗಳನ್ನು ಕಡಬದಲ್ಲಿ ವಿತರಣೆ ಮಾಡಲಾಯಿತು.
ಕಡಬ ಗ್ರಾಮ ಪಂಚಾಯತ್ ವತಿಯಿಂದ 1000 ಆಹಾರದ ಕಿಟ್ ವಿತರಣೆ..
ಮೊದಲ ಹಂತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವೃದ್ಧಾಪ್ಯ ವೇತನ ಪಡೆಯುವವರು, ವಿಶೇಷ ಚೇತನರು, ವಿಧವೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತಿದೆ.
ಕಡಬ ಗ್ರಾಮ ಪಂಚಾಯತ್
ಈ ಕುರಿತು ಮಾತನಾಡಿದ ಜಿಲ್ಲಾ ಪಂಚಾಯತ್ ಸದಸ್ಯ ಪಿ ಪಿ ವರ್ಗೀಸ್, ಮೊದಲ ಹಂತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ವೃದ್ಧಾಪ್ಯ ವೇತನ ಪಡೆಯುವವರು, ವಿಶೇಷ ಚೇತನರು, ವಿಧವೆಯರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರಿಗೆ ನೀಡಲಾಗುತ್ತಿದೆ. ಇನ್ನೆರಡು ದಿನಗಳಲ್ಲಿ ಮಾಧ್ಯಮ ಪ್ರತಿನಿಧಿಗಳು, ಗೃಹರಕ್ಷಕ ದಳದ ಸಿಬ್ಬಂದಿಗೂ ಆಹಾರ ಕಿಟ್ ನೀಡಲಾಗುವುದು ಎಂದರು.
ಇದೇ ಸಂದರ್ಭದಲ್ಲಿ ತಾಲೂಕು ಪಂಚಾಯತ್ ವತಿಯಿಂದ ನೀಡಿದ ಕಿಟ್ಗಳ ವಿತರಣೆಯೂ ನಡೆಯಿತು. ಈ ಸಂದರ್ಭದಲ್ಲಿ ಜನಪ್ರತಿನಿಧಿಗಳು, ಪಂಚಾಯತ್ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.