ಕರ್ನಾಟಕ

karnataka

ETV Bharat / state

ಬಂಗಾಳದ ಯುವತಿಯೋರ್ವಳ Social Media ಖಾತೆ ದುರ್ಬಳಕೆ ಆರೋಪ.. ಕಡಬದ ಯುವಕನ ಬಂಧನ - Kadaba boy arrested for misusing social media account news

ಕಾನೂನು ಕ್ರಮಗಳನ್ನು ಪೊರೈಸುವ ಸಲುವಾಗಿ ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲು ತಯಾರಿ ನಡೆಸಿದ್ದಾರೆ..

Kadaba boy arrested for misusing social media account
ಬಂಗಾಳದ ಯುವತಿಯೋರ್ವಳ Social Media ಖಾತೆ ದುರ್ಬಳಕೆ ಆರೋಪ

By

Published : Sep 4, 2021, 9:13 PM IST

ಕಡಬ :ಸಾಮಾಜಿಕ ಜಾಲತಾಣದಲ್ಲಿ ಪಶ್ಚಿಮ ಬಂಗಾಳದ ಯುವತಿಯೋರ್ವಳ ಖಾತೆಯನ್ನು ದುರ್ಬಳಕೆ ಮಾಡಿಕೊಂಡ ಎಂದು ಆರೋಪಿಸಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಡಬದ ಯುವಕನೋರ್ವನನ್ನು ಪಶ್ಚಿಮ ಬಂಗಾಳ ಪೊಲೀಸರು ಸೆ.4ರಂದು ಕಡಬಕ್ಕೆ ಆಗಮಿಸಿ ಬಂಧಿಸಿದ್ದಾರೆ.

ಬೆಂಗಳೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಮೂಲತಃ ಪಶ್ಚಿಮ ಬಂಗಾಳದ ಯುವತಿಗೆ ಸಂಬಂಧಿಸಿದಂತಹ ಖಾತೆಯನ್ನು ಕಡಬ ತಾಲೂಕಿನ ನೂಜಿಬಾಳ್ತಿಲದ ಯುವಕ, ಪ್ರಸ್ತುತ ಮಂಗಳೂರಿನಲ್ಲಿ ಟ್ರೇಡಿಂಗ್ ವ್ಯವಹಾರ ನಡೆಸುತ್ತಿರುವ ಸಂಜಯ್ ಕೃಷ್ಣ ಎಂಬಾತ ನಕಲಿಸಿರುವ ಆರೋಪ ಕೇಳಿ ಬಂದಿದೆ.

ಈ ಬಗ್ಗೆ ಯುವತಿಯು ಪಶ್ಚಿಮ ಬಂಗಾಳದ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎನ್ನಲಾಗಿದೆ. ಸೈಬರ್ ಕ್ರೈಂ ಕಾಯ್ದೆ ಅಡಿ ದೂರು ದಾಖಲಿಸಿಕೊಂಡ ಪಶ್ಚಿಮ ಬಂಗಾಳ ಪೊಲೀಸ್ ಅಧಿಕಾರಿ ಎಸ್ ಕೆ ತಾಜುದ್ದೀನ್ ನೇತೃತ್ವದ ತಂಡ ಕಡಬಕ್ಕೆ ಆಗಮಿಸಿ ಸ್ಥಳೀಯ ಪೊಲೀಸರ ನೆರವಿನೊಂದಿಗೆ ಆರೋಪಿಯನ್ನು ಬಂಧಿಸಿದ್ದಾರೆ.

ಕಾನೂನು ಕ್ರಮಗಳನ್ನು ಪೊರೈಸುವ ಸಲುವಾಗಿ ಆರೋಪಿಯನ್ನು ಪುತ್ತೂರು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪಶ್ಚಿಮ ಬಂಗಾಳಕ್ಕೆ ಕರೆದೊಯ್ಯಲು ತಯಾರಿ ನಡೆಸಿದ್ದಾರೆ.

ಓದಿ:ಪಾಕ್​ ಐಎಸ್​ಐ ಮುಖ್ಯಸ್ಥ ಅಫ್ಘನ್​ಗೆ ಭೇಟಿ : ಅಂತಾರಾಷ್ಟ್ರೀಯ ಸಮುದಾಯದಲ್ಲಿ ಕುತೂಹಲ

For All Latest Updates

TAGGED:

ABOUT THE AUTHOR

...view details