ಸುಳ್ಯ(ಮಂಗಳೂರು): ಡಬ್ಲ್ಯೂಎಸ್ಎಸ್ ಸ್ಪೋರ್ಟ್ಸ್ ಅಕಾಡೆಮಿ ನೇತೃತ್ವದಲ್ಲಿ ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಆನ್‌ಲೈನ್ ಪಂದ್ಯಾವಳಿಯ ಕರಾಟೆ ವಿಭಾಗದಲ್ಲಿ ಕಡಬ ತಾಲೂಕಿನ ಸಾನ್ವಿಕಾ ಎಂಬ ಬಾಲಕಿ ಕೆಎಸ್ ಗ್ಲೋಬಲ್ ವರ್ಲ್ಡ್ ರೆಕಾರ್ಡ್ಗೆ ಸೇರ್ಪಡೆಗೊಂಡಿದ್ದಾಳೆ.
ಗ್ಲೋಬಲ್ ವರ್ಲ್ಡ್ ರೆಕಾರ್ಡ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಬುಸಾಬ್ ಪ್ರಶಸ್ತಿ ಪ್ರಮಾಣಪತ್ರ ಹಾಗೂ ಬಹುಮಾನ ನೀಡಿ ಗೌರವಿಸಿದ್ದಾರೆ. ಒಂದು ನಿಮಿಷದಲ್ಲಿ ಗರಿಷ್ಠ ಪಂಚಿಂಗ್ ಮಾಡಿದ ಸಾಧನೆಗೆ ಈ ಪ್ರಶಸ್ತಿ ಲಭ್ಯವಾಗಿದೆ.
ಸಾನ್ವಿಕಾ ಪಿಜಕಳ ನಿವಾಸಿ ಸದಾನಂದ ಗೌಡ ಹಾಗೂ ವಾಣಿ ದಂಪತಿ ಪುತ್ರಿ. ಈಕೆ ಕಡಬ ಕ್ನಾನಾಯ ಜ್ಯೋತಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಎಸ್‌ಎಸ್‌ಎಲ್‌ಸಿ ವಿದ್ಯಾಭ್ಯಾಸ ಮುಗಿಸಿದ್ದಾಳೆ. ಈಕೆಗೆ ಕರಾಟೆ ಶಿಕ್ಷಕ ಯಾದವ್ ಬೀರಂತಂಡ್ಕ ಹಾಗೂ ಅಕ್ಷಯ್ ಎಂಬುವವರು ತರಬೇತಿ ನೀಡಿದ್ದಾರೆ.
ಗ್ಲೋಬಲ್ ವರ್ಲ್ಡ್ ರೆಕಾರ್ಡ್ ಕರಾಟೆ ಆನ್‌ಲೈನ್ ಸ್ಪರ್ಧೆ: ಕಡಬದ ಸಾನ್ವಿಕಾಳಿಗೆ ಪ್ರಶಸ್ತಿ ಉತ್ತಮ ಕ್ರೀಡಾಪಟುವಾಗಿರುವ ಸಾನ್ವಿಕಾ, ಕರಾಟೆಯಲ್ಲಿ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಥಮ ಸ್ಥಾನ ಗಳಿಸಿ ಹಲವು ಚಿನ್ನದ ಪದಕಗಳನ್ನು ಪಡೆದಿದ್ದಾಳೆ. ಹಾಡು, ನೃತ್ಯ, ಕಲೆಯಲ್ಲಿ ಪರಿಣತಿ ಪಡೆದಿದ್ದು, ಇತ್ತೀಚೆಗೆ ಖಾಸಗಿ ವಾಹಿನಿಯಲ್ಲಿ ನಡೆದ ಜೂನಿಯರ್ ಮಹಾರಾಜ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದಳು.
ಓದಿ: ಬಿಜೆಪಿಗೆ ತಲೆನೋವಾದ ಬೆಳಗಾವಿ ಮೇಯರ್ - ಉಪಮೇಯರ್ ಆಯ್ಕೆ: ಗೌಪ್ಯ ಸ್ಥಳದಲ್ಲಿ ಕಾರಜೋಳ - ಅಭಯ ಚರ್ಚೆ..