ಕರ್ನಾಟಕ

karnataka

ETV Bharat / state

ಮೆಕ್ಕಾಗೆ ತೆರಳಿದ್ದ ಕಡಬ ಮೂಲದ ಯಾತ್ರಾರ್ಥಿ ಹೃದಯಾಘಾತದಿಂದ ಸಾವು - ETV Bharath Kannada news

ಕಡಬದ ವ್ಯಕ್ತಿಯೋರ್ವ ಮೆಕ್ಕಾದಲ್ಲಿ ಮೃತಪಟ್ಟಿದ್ದಾರೆ. ಪವಿತ್ರ ತಾಣ ಮೆಕ್ಕಾದಲ್ಲಿ ಮೃತಪಟ್ಟರೆ ಅಲ್ಲಾಹು ಕೃಪೆಗೆ ಪಾತ್ರರಾದಂತೆ ಎಂದು ನಂಬಿಕೆಯೂ ಇದೆ.

Kadaba auto driver dies in Mecca
ಅಬೂಬಕ್ಕರ್

By

Published : Dec 21, 2022, 7:52 AM IST

ಕಡಬ(ದಕ್ಷಿಣ ಕನ್ನಡ):ಪವಿತ್ರ ಉಮ್ರಾ ಯಾತ್ರೆಯ ವೇಳೆ ಕಡಬದ ವ್ಯಕ್ತಿಯೋರ್ವ ಮುಸ್ಲಿಮರ ಪವಿತ್ರ ತಾಣ ಮೆಕ್ಕಾದಲ್ಲಿ ನಿಧನರಾದ ಘಟನೆ ನಡೆದಿದೆ. ಕಡಬದ ಕೋಡಿಂಬಾಳದ ನಿವಾಸಿ ಆಟೋ ಚಾಲಕರಾಗಿರುವ ಅಬೂಬಕ್ಕರ್ ಮೃತ ವ್ಯಕ್ತಿ. ಇವರು ತಮ್ಮ ಪತ್ನಿ ಸೇರಿದಂತೆ 40 ಜನರ ತಂಡದ ಜೊತೆಗೆ ಪವಿತ್ರ ಉಮ್ರಾ ಯಾತ್ರೆ ಕೈಗೊಂಡಿದ್ದರು.

ಉಮ್ರಾ ಯಾತ್ರೆಯ ವೇಳೆ ಮುಸ್ಲಿಮರ ಪವಿತ್ರ ತಾಣವಾಗಿರುವ ಸೌದಿ ಅರೇಬಿಯಾದಲ್ಲಿರುವ ಮೆಕ್ಕಾದಲ್ಲಿ ಅಬೂಬಕ್ಕರ್ ಅವರಿಗೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣವೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಲಾಗಿತ್ತು. ಆದರೆ ಅಷ್ಟೊತ್ತಿಗಾಗಲೇ ಅವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಮುಸ್ಲಿಂ ಪದ್ಧತಿ ಪ್ರಕಾರ ಉಮ್ರಾ ಮತ್ತು ಹಜ್‌ಯಾತ್ರೆ ಸಮಯದಲ್ಲಿ ಮೆಕ್ಕಾದಲ್ಲಿ ಮೃತರಾಗುವುದು ಅತ್ಯಂತ ವಿರಳ ಮತ್ತು ಪುಣ್ಯ ಎಂಬ ನಂಬಿಕೆ ಇದೆ. ಮೃತದೇಹವನ್ನು ಮೆಕ್ಕಾದಲ್ಲೇ ಅಂತ್ಯಕ್ರಿಯೆ ಮಾಡಲು ಕುಟುಂಬಸ್ಥರು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ;ಅನ್ಯಧರ್ಮೀಯರ ಹಿಟ್​ ಲಿಸ್ಟ್​ ತಯಾರಿಸಿದ್ದ ಪಿಎಫ್​ಐ ರಹಸ್ಯ ವಿಭಾಗ: ಕೋರ್ಟ್​ಗೆ ಎನ್​ಐಎ ಮಾಹಿತಿ

ABOUT THE AUTHOR

...view details