ಕರ್ನಾಟಕ

karnataka

ETV Bharat / state

ಮತೀಯ ಗಲಭೆ ಸೃಷ್ಟಿಸಲು ಉಳ್ಳಾಲ ಅಂಗಡಿಗಳಿಗೆ ಬೆಂಕಿ; ಕೆ. ಅಶ್ರಫ್ - ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ.ಅಶ್ರಫ್

ಮುಸ್ಲಿಂ ಬಾಹುಳ್ಯವಾದ ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದಲೇ ಮತೀಯ ಉದ್ವಿಗ್ನತೆಗೆ ನಾಂದಿ ಹಾಡುವ ಪ್ರಯತ್ನ ಇದಾಗಿದೆ ಎಂದು ಮುಸ್ಲಿಂ ಒಕ್ಕೂಟ ಅಧ್ಯಕ್ಷ ಕೆ. ಅಶ್ರಫ್ ಆರೋಪಿಸಿದ್ದಾರೆ.

K Ashraf
ಕೆ.ಅಶ್ರಫ್

By

Published : Jan 10, 2021, 12:54 PM IST

ಮಂಗಳೂರು:ಮತೀಯ ಗಲಭೆ ಸೃಷ್ಟಿ ಮಾಡುವ, ಸಮಾಜದ ಶಾಂತಿ ಕೆಡಿಸುವ ಉದ್ದೇಶದಿಂದ ಉಳ್ಳಾಲ ತೊಕ್ಕೊಟ್ಟು ಒಳ ಪೇಟೆಯಲ್ಲಿ ನಿನ್ನೆ ದುಷ್ಕರ್ಮಿಗಳು ಮಾಂಸದಂಗಡಿಗೆ ಬೆಂಕಿ ಹಚ್ಚಿದ್ದಾರೆ ಎಂದು ಮಾಜಿ ಮೇಯರ್, ದ.ಕ.ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಕೆ. ಅಶ್ರಫ್ ಆರೋಪಿಸಿದ್ದಾರೆ.

ಮುಸ್ಲಿಂ ಬಾಹುಳ್ಯವಾದ ಮಂಗಳೂರು ವಿಧಾನ ಸಭಾ ಕ್ಷೇತ್ರದಿಂದಲೇ ಮತೀಯ ಉದ್ವಿಗ್ನತೆಗೆ ನಾಂದಿ ಹಾಡುವ ಪ್ರಯತ್ನ ಇದಾಗಿದೆ. ಇತ್ತೀಚೆಗೆ ಕಲ್ಲಡ್ಕ ಪ್ರಭಾಕರ ಭಟ್ಟರ ಪದ ಬಳಕೆ 'ಉಳ್ಳಾಲ ಪಾಕಿಸ್ತಾನ'ದ ಮುಂದುವರಿಕೆಯ ಭಾಗವಾಗಿ ನಿನ್ನೆಯ ಅಂಗಡಿ ಸುಡುವಿಕೆ ಘಟನೆ ನಡೆದಿದೆ. ಈ ದುಷ್ಕೃತ್ಯವನ್ನು ದ.ಕ. ಜಿಲ್ಲಾ ಮುಸ್ಲಿಂ ಒಕ್ಕೂಟವು ತೀವ್ರವಾಗಿ ಖಂಡಿಸುತ್ತದೆ ಎಂದರು.

ಇದನ್ನೂ ಓದಿ:ಸ್ಥಳೀಯ ಯುವಕರೊಂದಿಗೆ ಗಲ್ಲಿ ಕ್ರಿಕೆಟ್ ಆಡಿ ರಿಲ್ಯಾಕ್ಸ್​ ಆದ ಮಂಗಳೂರು ಪೊಲೀಸ್ ಕಮಿಷನರ್

ಕೋಮು ಗಲಭೆ ಸೃಷ್ಟಿಸಲು ಪ್ರಯತ್ನಿಸುತ್ತಿರುವ ದುಷ್ಕರ್ಮಿಗಳ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು. ಮಾಂಸ ವ್ಯಾಪಾರಿಗಳಿಗೆ ನಷ್ಟ ಪರಿಹಾರ ನೀಡಿ, ಅಲ್ಲಿ ನಿರ್ಭೀತಿಯಿಂದ ವ್ಯಾಪಾರ ಮಾಡಲು ಅವಕಾಶ ಕಲ್ಪಿಸಬೇಕೆಂದು ಕೆ. ಅಶ್ರಫ್ ಪತ್ರಿಕಾ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ

ABOUT THE AUTHOR

...view details